6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದು ದೊಡ್ಡ ಸುದ್ದಿಯಾಯ್ತು, ಬೆಂಗಳೂರು ನೀಲಿಯಾಗಿದ್ದು ಸುದ್ದಿಯಾಗಲಿಲ್ಲ | ಕವಿರಾಜ್ ಬೇಸರ - Mahanayaka
10:23 AM Monday 15 - December 2025

6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದು ದೊಡ್ಡ ಸುದ್ದಿಯಾಯ್ತು, ಬೆಂಗಳೂರು ನೀಲಿಯಾಗಿದ್ದು ಸುದ್ದಿಯಾಗಲಿಲ್ಲ | ಕವಿರಾಜ್ ಬೇಸರ

kavi raj
20/02/2022

ಬೆಂಗಳೂರು: 6 ವಿದ್ಯಾರ್ಥಿನಿಯರು ಹಿಜಾಬ್ ಬೇಕು ಎಂದಿದ್ದು, ಹದಿನೈದು ಇಪ್ಪತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದದ್ದು ರಾಜ್ಯಕ್ಕೆ ಬೆಂಕಿ ಹಚ್ಚುವಷ್ಟು ದೊಡ್ಡ ಸುದ್ದಿಯಾಯ್ತು, ಆದರೆ, ನೀಲಿ ಶಾಲಿನ ಜನ ಸಾಗರ ಪ್ರತಿಭಟನೆ ನಡೆಸಿದ್ದು, ಸುದ್ದಿಯೇ ಆಗುವುದಿಲ್ಲ ಎಂದು ಖ್ಯಾತ ಕವಿ ಕವಿರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ವಿಧಾನಸೌಧ-ಹೈಕೋರ್ಟ್ ಚಲೋ ಬೃಹತ್ ಪ್ರತಿಭಟನೆ ನಡೆದು, ಬೆಂಗಳೂರು ನೀಲಿ ಸಾಗರದಂತಾಗಿದ್ದರೂ ಯಾವುದೇ ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕೆಗಳು ವರದಿ ಮಾಡದೇ ಉದ್ದೇಶ ಪೂರ್ವಕ ಅಸಡ್ಡೆ ತೋರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನೀಲಿ ಶಾಲಿನ ಜನ ಸಾಗರ ಪ್ರತಿಭಟನೆ ನಡೆಸಿದ್ದು ಸುದ್ದಿಯೇ ಆಗುವುದಿಲ್ಲ .  ಆರು ವಿದ್ಯಾರ್ಥಿನಿಯರು ಹಿಜಾಬ್ ಬೇಕು ಎಂದಿದ್ದು , ಹದಿನೈದಿಪ್ಪತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಬಂದಿದ್ದು, ಒಂದು ಶಾಲೆಯ ಮಟ್ಟದಲ್ಲೇ ಆಪ್ತ ಮಾತುಕತೆಯಲ್ಲಿ ಬಗೆಹರಿಸಿ ಬಿಡಬಹುದಾಗಿದ್ದ ಸಣ್ಣ ಘಟನೆಯನ್ನು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವಷ್ಟು ದೊಡ್ಡ ಸುದ್ದಿ ಮಾಡಿ ದ್ವೇಷದ ವಿಷ ಹರಡಲಾಗುತ್ತದೆ. ಎಲ್ಲವನ್ನು ನಿಯಂತ್ರಿಸಲಾಗುತ್ತಿದೆ. ಎಲ್ಲವನ್ನು ನಿರ್ದೇಶಿಸಲಾಗುತ್ತಿದೆ. ಇಡೀ ವ್ಯವಸ್ಥೆ ಒಂದು ಸಂಚಿಗೆ ಸಿಲುಕಿದೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರತ ಮಾತೆಯ ರಕ್ಷಣೆಗೋಸ್ಕರ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಿ: ಪ್ರಮೋದ್ ಮುತಾಲಿಕ್ ಕರೆ

ದಲಿತರು ಮಾಧ್ಯಮಗಳ ಆರಂಭಿಸುವ ಮುನ್ನ ಇದನ್ನೊಮ್ಮೆ ಓದಿ….

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಸಂವಿಧಾನ ಪರ ಸಂಘಟನೆಗಳಿಂದ ಹೊಸ ಮಾಧ್ಯಮ ತರಲು ಗಂಭೀರ ಚಿಂತನೆ!

ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ

ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ