ದ್ವಿಚಕ್ರ ವಾಹನದಿಂದ ಬಸ್ಸಿನಡಿಗೆ ಬಿದ್ದ 15 ವರ್ಷದ ಬಾಲಕಿಯ ದಾರುಣ ಸಾವು - Mahanayaka

ದ್ವಿಚಕ್ರ ವಾಹನದಿಂದ ಬಸ್ಸಿನಡಿಗೆ ಬಿದ್ದ 15 ವರ್ಷದ ಬಾಲಕಿಯ ದಾರುಣ ಸಾವು

udupi news
22/11/2022


Provided by

ಬೆಂಗಳೂರು: ಬಸ್ ಹರಿದು ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಗರದ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ನಡೆದಿದೆ.

ಲಾವ್ಯಾಶ್ರೀ(15) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.  ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ತಾಯಿ, ಮಗಳು ಮತ್ತು ಮಗ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಭಟ್ಟರಹಳ್ಳಿಯಲ್ಲಿ ದ್ವಿಚಕ್ರವಾಹನ ಸ್ಕಿಡ್ ಆಗಿ ಬಿದ್ದಿದೆ.

ತಾಯಿ ಪ್ರಿಯದರ್ಶಿನಿ ಹಾಗೂ ಮಗ ಯಶಸ್ವಿನ್ ಬೈಕ್ ನಿಂದ ರಸ್ತೆಯ ಎಡಗಡೆಗೆ ಬಿದ್ದಿದ್ದು, ಲಾವ್ಯಾಶ್ರೀ ಬಲಗಡೆಗೆ ಬಿದ್ದಿದ್ದಾಳೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಬಿಎಂಟಿಸಿ ಬಸ್ ನ ಚಕ್ರಕ್ಕೆ ಸಿಲುಕಿದ ಲಾವ್ಯಾಶ್ರೀ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಘಟನೆ ಸಂಬಂಧ ಕೆ.ಆರ್.ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ