ಕಲ್ಯಾಣ ಮಂಟಪಕ್ಕೆ ಬೆಂಕಿ ಬಿದ್ದರೂ, ನಿಶ್ಚಿಂತೆಯಿಂದ ಊಟ ಮುಂದುವರಿಸಿದ ಅತಿಥಿಗಳು! ವಿಡಿಯೋ ವೈರಲ್ - Mahanayaka
10:18 AM Tuesday 14 - October 2025

ಕಲ್ಯಾಣ ಮಂಟಪಕ್ಕೆ ಬೆಂಕಿ ಬಿದ್ದರೂ, ನಿಶ್ಚಿಂತೆಯಿಂದ ಊಟ ಮುಂದುವರಿಸಿದ ಅತಿಥಿಗಳು! ವಿಡಿಯೋ ವೈರಲ್

thane
30/11/2021

ಥಾಣೆ: ಮದುವೆಯ ಆರತಕ್ಷತೆಯ ವೇಳೆ ಮದುವೆ ಮಂಟಪದಲ್ಲಿ ಬೆಂಕಿ ಕಾಣಿಸಿಕೊಂಡರೂ, ಊಟಕ್ಕೆ ಕುಳಿತಿದ್ದ ಅತಿಥಿಗಳು ಸ್ವಲ್ಪವೂ ಕದಲದೇ ನಿಶ್ಚಿಂತೆಯಿಂದ ಊಟ ಮಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.


Provided by

ಥಾಣೆಯ ಭಿವಂಡಿಯ ಅನ್ಸಾರಿ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆಗೆ ಆಗಮಿಸಿದ್ದ ಅತಿಥಿಗಳು ಊಟ ಮಾಡುತ್ತಿರುವ ಸಂದರ್ಭದಲ್ಲಿಯೇ ಕಲ್ಯಾಣ ಮಂಟಪದ ಸ್ಟೋರ್ ರೂಮ್ ನಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಹತ್ತಿಕೊಂಡಿದೆ. ಆದರೆ, ಬೆಂಕಿ ಹತ್ತಿಕೊಂಡರೂ ಅತಿಥಿಗಳು ಕೊಂಚವೂ ವಿಚಲಿತರಾಗದೇ, ಬೆಂಕಿಯನ್ನು ನೋಡುತ್ತಾ, ಊಟ ಮುಂದುವರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಅತಿಥಿಗಳು ಊಟಕ್ಕೆ ಕುಳಿತಾಗ, ನಿಧಾನವಾಗಿ ಊಟ ಮಾಡಿ, ಆರಾಮವಾಗಿ ಊಟ ಮಾಡಿ ಎನ್ನುವುದು ವಾಡಿಕೆ. ಆದರೆ, ಒಂದು ಬದಿಯಿಂದ ಕಲ್ಯಾಣ ಮಂಟಪಕ್ಕೆ ಬೆಂಕಿ ಬಿದ್ದಿದೆ ಎಂದರೂ ನಿಶ್ಚಿಂತೆಯಿಂದ, ಆರಾಮವಾಗಿ ಊಟ ಮಾಡುತ್ತಿರುವ ಅತಿಥಿಗಳ ವಿಡಿಯೋ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಡಿಸಿದ್ದಾರೆ.

ಇನ್ನೂ ರಾತ್ರಿ 10 ಗಂಟೆಯ ವೇಳೆಗೆ ಮದುವೆ ಮಂಟಪದ ಸ್ಟೋರ್ ರೂಮ್ ಗೆ ಬೆಂಕಿ ಹತ್ತಿಕೊಂಡಿತ್ತು. ಸ್ಟೋರ್ ರೂಮ್ ನಲ್ಲಿದ್ದ ಪಟಾಕಿಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ದಳದಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್  ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ, ಕಲ್ಯಾಣ ಮಂಟಪದ ಅಲಂಕಾರ ಸಾಮಗ್ರಿಗಳು, ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ಕೊಳೆಯುತ್ತಿದ್ದ 2 ಕೊವಿಡ್ ಮೃತದೇಹಗಳು!

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು!

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿಯಿಡೀ ಸಂಚರಿಸಿದ ವಾಹನಗಳು!

ಆಟೋಗೆ ಡಿಕ್ಕಿ ಹೊಡೆದ ಲಾರಿ: ಬಾಲಕನ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

ಲಾಕಪ್ ಡೆತ್: ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು!

ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ | ಛಲವಾದಿ ನಾರಾಯಣಸ್ವಾಮಿ

ಇತ್ತೀಚಿನ ಸುದ್ದಿ