Google map: ಗೂಗಲ್ ಲೊಕೇಶನ್ ನೋಡಿಕೊಂಡು ಪ್ರಯಾಣಿಸುವವರೇ ಎಚ್ಚರ: ಗದ್ದೆಗೆ ಇಳಿದ ಟಿಟಿ ವಾಹನ! - Mahanayaka

Google map: ಗೂಗಲ್ ಲೊಕೇಶನ್ ನೋಡಿಕೊಂಡು ಪ್ರಯಾಣಿಸುವವರೇ ಎಚ್ಚರ: ಗದ್ದೆಗೆ ಇಳಿದ ಟಿಟಿ ವಾಹನ!

chikkamagaluru google map
21/05/2025


Provided by

ಚಿಕ್ಕಮಗಳೂರು:  ಗೂಗಲ್ ಲೋಕೇಶನ್ (Google map) ಹಾಕಿಕೊಂಡು  ಪ್ರಯಾಣಿಸುವ ವಾಹನ ಸವಾರರು  ಎಚ್ಚರವಾಗಿರಬೇಕು ಎನ್ನುವುದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.

ಗೂಗಲ್ ಮ್ಯಾಪ್ ನ ಮಾರ್ಗದರ್ಶನದಂತೆ ಪ್ರಯಾಣಿಸಿದ ಟಿಟಿ ವಾಹನವೊಂದು ಗದ್ದೆಯೊಂದರ ಬಳಿ ಬಂದು ನಿಂತ ಘಟನೆ  ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ನಡೆದಿದೆ.

ಬಾಳೆಹೊನ್ನೂರಿಂದ ಬಂದು ಮೂಡಿಗೆರೆಗೆ ಹೊರಟಿದ್ದ ಬೆಂಗಳೂರು ಮೂಲದ ಟಿಟಿ ವಾಹನ ಚಾಲಕ ಗೂಗಲ್ ಮ್ಯಾಪ್ ನೋಡಿ ಕೊಂಡು ವಾಹನ ಚಲಾಯಿಸಿದ್ದಾರೆ. ಆದರೆ ಗೂಗಲ್ ಮ್ಯಾಪ್ ತಪ್ಪು ದಾರಿ ಸೂಚಿಸಿದ್ದು, ಟಿಟಿ ವಾಹನ  ಗದ್ದೆ ಬಳಿ ಹೋಗಿ ನಿಂತು ಸಿಕ್ಕಿ ಹಾಕಿಕೊಂಡಿದೆ.

ಆಲ್ದೂರು ಗ್ರಾಮದೊಳಗಿಂದ ಕಿರಿದಾದ ರಸ್ತೆಯಲ್ಲಿ ಹೋಗಿ ಟಿಟಿ ವಾಹನ ಲಾಕ್ ಆಗಿದೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಮತ್ತೆ ವಾಪಸ್ ಹೋದ ಟಿಟಿ ವಾಹನ ಹೋಗಿದೆ. ಸ್ಥಳೀಯರ ಮಾಹಿತಿ ಪಡೆದ ಬಳಿಕ ಟಿಟಿ ವಾಹನ ಚಾಲಕ ಗೂಗಲ್ ಮ್ಯಾಪ್ ಆಫ್ ಮಾಡುವುದನ್ನು ಮರೆಯಲಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ