ಬಡತನ‌ ನಿರ್ಮೂಲನೆ ‌ಮಾಡಿಲ್ವಂತೆ ಕಾಂಗ್ರೆಸ್: ಭಾರತ್ ಜೋಡೋ ಯಾತ್ರೆಯನ್ನು ವ್ಯಂಗ್ಯವಾಡಿದ ಬಿಆರ್ ಎಸ್ ನಾಯಕಿ - Mahanayaka
10:22 PM Tuesday 18 - November 2025

ಬಡತನ‌ ನಿರ್ಮೂಲನೆ ‌ಮಾಡಿಲ್ವಂತೆ ಕಾಂಗ್ರೆಸ್: ಭಾರತ್ ಜೋಡೋ ಯಾತ್ರೆಯನ್ನು ವ್ಯಂಗ್ಯವಾಡಿದ ಬಿಆರ್ ಎಸ್ ನಾಯಕಿ

17/08/2023

ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ನಾಯಕಿ ಕೆ.ಕವಿತಾ ಅವರು ಕಾಂಗ್ರೆಸ್ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಬಡತನವನ್ನು ನಿರ್ಮೂಲನೆ ಮಾಡುವ ಬದಲು ಬಡವರನ್ನು ನಿರ್ಮೂಲನೆ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಟೀಕಿಸಿದ ಅವರು, ಇದನ್ನು ‘1,000 ಚುಹೆ ಖಾಕೆ ಬಿಲ್ಲಿ ಹಜ್ ಕೋ ಚಾಲಿ’ ಎಂದು ವ್ಯಂಗ್ಯವಾಡಿದ್ದಾರೆ.

ಭೋಡಾನ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಿಆರ್ ಎಸ್ ಮುಖ್ಯಸ್ಥ ಕೆಸಿಆರ್ ಅವರ ಪುತ್ರಿ ಕವಿತಾ, ಕಾಂಗ್ರೆಸ್ ನ ‘ಗರೀಬಿ ಹಟಾವೋ’ ಘೋಷಣೆಯ ಹೊರತಾಗಿಯೂ ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ 62 ವರ್ಷಗಳ ಆಡಳಿತವನ್ನು ಟೀಕಿಸಿದ ಅವರು, ಕಾಂಗ್ರೆಸ್ ತನ್ನ ಆಡಳಿತದ ವರ್ಷಗಳಲ್ಲಿ ತೆಲಂಗಾಣದಲ್ಲಿ ಮುಸ್ಲಿಮರಿಗೆ ಅಥವಾ ಬಡವರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶವನ್ನು ಬಹಿರಂಗವಾಗಿ ಘೋಷಿಸಿದ ನಂತರ ಇದು ನಿಜಾಮಾಬಾದ್ ಲೋಕಸಭಾ ಕ್ಷೇತ್ರಕ್ಕೆ ಅವರ ಮೊದಲ ಭೇಟಿಯಾಗಿದೆ. ಕಳೆದ 10 ವರ್ಷಗಳಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ರಾಜ್ಯದಲ್ಲಿ ತರಲು ಸಾಧ್ಯವಾದ ಕ್ರಾಂತಿಯನ್ನು ತೆಲಂಗಾಣದಲ್ಲಿ ಯಾರೂ ತರಲು ಸಾಧ್ಯವಿಲ್ಲ ಎಂದು ಕವಿತಾ ಹೇಳಿದರು.

ಇತ್ತೀಚಿನ ಸುದ್ದಿ