ಭಾರತ್ ಜೋಡೋ ಯಶಸ್ವಿಗೆ ಸುದರ್ಶನ ಹೋಮದ ಮೊರೆ ಹೋದ ಕಾಂಗ್ರೆಸಿಗರು! - Mahanayaka

ಭಾರತ್ ಜೋಡೋ ಯಶಸ್ವಿಗೆ ಸುದರ್ಶನ ಹೋಮದ ಮೊರೆ ಹೋದ ಕಾಂಗ್ರೆಸಿಗರು!

congress
02/10/2022


Provided by

ಬಳ್ಳಾರಿ:  ಭಾರತ್ ಜೋಡೋ ಯಾತ್ರೆ ಅ.17ರಂದು ಬಳ್ಳಾರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲು ಕಾಂಗ್ರೆಸ್ ಕಾರ್ಯಕರ್ತರು  ಹೋಮಾದ ಮೊರೆ ಹೋಗಿದ್ದು,  ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಹೋಮ ನಡೆಸಿದ್ದಾರೆ.

ಈಗಾಗಲೇ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದ್ದು, ಕಾಂಗ್ರೆಸ್ ನ ಘಟಾನುಘಟಿ ನಾಯಕರುಗಳು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.  ಇನ್ನೊಂದೆಡೆ ಕಾರ್ಯಕ್ರಮದ ಯಶಸ್ವಿಗೆ ಕಾಂಗ್ರೆಸಿಗರು ಹೋಮ ನಡೆಸಿದ್ದಾರೆ.

ಇಂದು ಬೆಳಗ್ಗಿನ ಜಾವ ಮುನ್ಸಿಪಲ್ ಮೈದಾನದಲ್ಲಿ ಕೃಷ್ಣಮಠದ ಪುರೋಹಿತ ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಸುದರ್ಶನ ಹೋಮ ನಡೆಸಿ, ಸ್ಥಳ ಶುದ್ಧಿ ಮಾಡಿ ಪ್ರಾರ್ಥಿಸಿಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ