ಭಾರತದಲ್ಲಿ ಕೊರೊನಾ ಸೋಂಕಿಗೆ 1.85 ಲಕ್ಷ ಮಂದಿ ಬಲಿ! - Mahanayaka

ಭಾರತದಲ್ಲಿ ಕೊರೊನಾ ಸೋಂಕಿಗೆ 1.85 ಲಕ್ಷ ಮಂದಿ ಬಲಿ!

corona
22/04/2021


Provided by

ನವದೆಹಲಿ: ಕಳೆದ 24 ಗಂಟೆಗಳಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 3 ಲಕ್ಷ ಗಡಿ ದಾಟಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಏಪ್ರಿಲ್ 20ರ ಬೆಳಗ್ಗೆ 8 ಗಂಟೆಯಿಂದ  ಏಪ್ರಿಲ್ 21ರ ಬೆಳಗ್ಗೆ 8 ಗಂಟೆಯವರೆಗಿನ ದಾಖಲೆಯನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ 3,14,835 ಹೊಸ ಪ್ರಕರಣಗಳು ದಾಖಲಾಗಿವೆ.  ಇದರೊಂದಿಗೆ ಸೋಂಕಿತರ ಸಂಖ್ಯೆ 1,59,30,965ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ  2,104 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ.  24 ಗಂಟೆಗಳಲ್ಲಿ ಕೊರೊನಾ ಸೋಂಕಿತ 1,78,841 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 1,34,54,880ಕ್ಕೆ ತಲುಪಿವೆ.

ದೇಶದಲ್ಲಿ ಒಂದೇ ದಿನ 16,51,711 ಮಂದಿ ಕೊರೊನಾ ಪರೀಕ್ಷೆಗೊಳಪಟ್ಟಿದ್ದು, ಈವರೆಗೆ 27,27,05,103 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.

ಇತ್ತೀಚಿನ ಸುದ್ದಿ