ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ | ಗುಲಾಮ್ ನಬಿ ಆಜಾದ್ ಭಾವುಕ - Mahanayaka

ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ | ಗುಲಾಮ್ ನಬಿ ಆಜಾದ್ ಭಾವುಕ

09/02/2021


Provided by

ನವದೆಹಲಿ: ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಪಾಕಿಸ್ತಾನಕ್ಕೆ ತೆರಳದ ಅದೃಷ್ಠವಂತರಲ್ಲಿ ನಾನು ಒಬ್ಬ ಎಂದು ಕಾಂಗ್ರೆಸ್ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ತಮ್ಮ ವಿದಾಯದ ಭಾಷಣದಲ್ಲಿ ಭಾವುಕರಾಗಿದ್ದಾರೆ.

ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ ನಾನು ಭಾರತದಲ್ಲಿ ಭಾರತೀಯ ಮುಸ್ಲಿಂನಾಗಿರುವುದಕ್ಕೆ ಹೆಮ್ಮೆಯಿದೆ. ಇನ್ನು ರಾಜಕೀಯವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನನಗೆ ಜನರು ಪ್ರೀತಿ ದೊರೆತಿದೆ ಎಂದು ಅವರು ಹೇಳಿದರು.

ಗುಲಾಮ್ ನಬಿ ಆಜಾದ್ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದ್ ಬಗ್ಗೆ ಪ್ರಸ್ತಾಪಿಸಿ ಭಾವುಕರಾದರು. ಅಲ್ಲದೆ 2005ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ್ದ ಮೋದಿ ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿ