ಜೀವ ದಾನ ಮಾಡಿ ಭಾಸ್ಕರ್ ಮಳವೂರು ಸಮಾಜಕ್ಕೆ ಆದರ್ಶರಾಗಿದ್ದಾರೆ: ಮಂಜಪ್ಪ ಪುತ್ರನ್ - Mahanayaka

ಜೀವ ದಾನ ಮಾಡಿ ಭಾಸ್ಕರ್ ಮಳವೂರು ಸಮಾಜಕ್ಕೆ ಆದರ್ಶರಾಗಿದ್ದಾರೆ: ಮಂಜಪ್ಪ ಪುತ್ರನ್

bhaskar malavur
25/06/2023

  • ಭಾಸ್ಕರ್ ಮಳವೂರು ಅವರಿಗೆ ನುಡಿ ನಮನ ಕಾರ್ಯಕ್ರಮ

ಬಜಪೆ: ಭಾಸ್ಕರ್ ಮಳವೂರುರವರ ಆಸೆಯಂತೆ ಅವರ ಮೃತ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಈ ಮೂಲಕ ಅವರು ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದು ಹಿರಿಯ ದಲಿತ ಮುಖಂಡರಾದ ಮಂಜಪ್ಪ ಪುತ್ರನ್ ಹೇಳಿದ್ದಾರೆ.

ಬಿಎಸ್ಪಿ  ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇದರ ವತಿಯಿಂದ ಭಾನುವಾರ ಪೇಜಾವರದ ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರು ಹಾಗೂ ಮುಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಎಸ್ಪಿಯ ಮಾಜಿ ಉಸ್ತುವಾರಿ ಭಾಸ್ಕರ್ ಮಳವೂರು ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾಸ್ಕರ್ ಮಳವೂರು ಮತ್ತು ನಾನು ಆತ್ಮೀಯ ಒಡನಾಡಿಗಳಾಗಿದ್ದು, ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದು, ಅನೇಕ ಭೂ ಹೋರಾಟಗಳಲ್ಲಿ, ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆವು,   ಬಹುಜನ ಸಮಾಜ ಪಕ್ಷದ ರಾಜ್ಯದ ಪ್ರಥಮ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಮತ್ತು 3ನೇ ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ಧಾರೆ. ಬಜಪೆ  ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ವಾದ್ಯ ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದೇವಪ್ಪ ಬೋದ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರು, ಜಿಲ್ಲಾ ಖಜಾಂಚಿ ವಿಮಲಾ ಕಾಂತಪ್ಪ, ಬಿಎಸ್ಪಿ ಜಿಲ್ಲಾ ಸಂಯೋಜಕ ನಾರಾಯಣ ಬೋದ್, ಬಿಎಸ್ಪಿ ಮಂಗಳೂರು ಉತ್ತರ ಉಸ್ತುವಾರಿ ಲೋಕೇಶ್ ಮುತ್ತೂರು, ಬೌದ್ಧ ಮಹಾಸಭಾ ದಮ್ಮಚಾರಿ ಎಸ್. ಆರ್. ಲಕ್ಷ್ಮಣ್, ದಲಿತ ಮುಖಂಡರಾದ ಪದ್ಮನಾಭ ಪೇಜಾವರ, ಶಿವರಾಮ್ ಪೇಜಾವರ, ವಿಠಲ್ ಕುಂದರ್,  ಗೀತಾ ಕರಂಬಾರ್, ಭಾಸ್ಕರ್ ಮಳವೂರು ಅವರ ಪುತ್ರರಾದ ಹರೀಶ್ ಎಂ.ಬಿ. ಲೋಕೇಶ್ ಎಂ.ಬಿ. ಉಪಸ್ಥಿತರಿದ್ದರು.

ಬಿಎಸ್ಪಿ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು ನಿರೂಪಿಸಿದರು.  ರಾಕೇಶ್ ಕುಂದರ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ