ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ: ಶಿವರಾಜ್ ತಂಗಡಗಿ - Mahanayaka

ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ: ಶಿವರಾಜ್ ತಂಗಡಗಿ

shivaraj thangadi
25/03/2022


Provided by

ಕೊಪ್ಪಳ: ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಡಿಎಕ್ಸ್ ಬಾಂಬ್ ಹೇಗೆ ಬಂತು? ನೀವು ಸರ್ಕಾರ ಮಾಡುತ್ತಿರೋ ದನಕಾಯುತ್ತಿರೋ? ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ ಎಂದರು.

ಚುನಾವಣೆ ಬಂದ ತಕ್ಷಣ ಇವರಿಗೆ ಪಾಕಿಸ್ತಾನ, ಸೈನಿಕರು ನೆನಪಾಗುತ್ತಾರೆ. ದೇಶದಲ್ಲಿ ಸರ್ಕಾರ ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ದಿ ಕಾಶ್ಮೀರಿ ಫೈಲ್ ಸಿನಿಮಾ ಬಗ್ಗೆ ಅವರು ವ್ಯಂಗ್ಯವಾಡಿದರು.‌

ಬಿಜೆಪಿಯವರು ಟಿಕೆಟ್ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಸಹಾಯ ಮಾಡಿದ್ದೇ ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾತುಬಾರದ ಬಾಲಕನ ಹತ್ಯೆ: ಗೋಣಿ ಚೀಲದಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು

ಕಾಶ್ಮೀರ ಹತ್ಯಾಕಾಂಡ: ಮರು ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಸಿಮೆಂಟ್ ಲಾರಿಗಳ ನಡುವೆ ಭೀಕರ ಅಪಘಾತ: ಚಾಲಕ ಸಜೀವ ದಹನ

ತಮಿಳುನಾಡಿನ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಇತ್ತೀಚಿನ ಸುದ್ದಿ