ಭೀಕರ ಅಪಘಾತ: ಅಯ್ಯಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಇಬ್ಬರು ಸಾವು - Mahanayaka
7:32 PM Thursday 16 - October 2025

ಭೀಕರ ಅಪಘಾತ: ಅಯ್ಯಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಇಬ್ಬರು ಸಾವು

accident
08/01/2022

ಚಿಕ್ಕಬಳ್ಳಾಪುರ: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿಯಲ್ಲಿ ನಡೆದಿದೆ.


Provided by

22 ವರ್ಷ ವಯಸ್ಸಿನ ಧರಣೀಶ್ ಹಾಗೂ 52 ವರ್ಷ ವಯಸ್ಸಿನ ನಿರಂಜನ್ ಸಿಂಗ್ ಮೃತ ವ್ಯಕ್ತಿಗಳು ಎಂದು  ಗುರುತಿಸಲಾಗಿದ್ದು, ಮೃತರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.  ಶಬರಿಮಲೆಯಿಂದ ವಾಪಸ್ ಆಗುತ್ತಿದ್ದ ವೇಳೆ ಕಾರ್ ನ ಟೈರ್ ಪಂಚರ್ ಆಗಿದ್ದು, ರಸ್ತೆ ಬದಿ ಕಾರು ನಿಲ್ಲಿಸಿ ಸ್ಟೆಪ್ನಿ ಬದಲಿಸುತ್ತಿದ್ದ ವೇಳೆ ಕ್ಯಾಮಟರ್ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಚಾಲಕ ಕ್ಯಾಂಟರ್ ಲಾರಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

6ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ

‘ಹರೀಶ ವಯಸ್ಸು 36’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ  ಹಾಡು ಬಿಡುಗಡೆ

“ಆ ತಜ್ಞ ಬೋ***ಮಕ್ಕಳ ಹೆಸರು ಹೇಳುತ್ತೀರಾ?” | ಮಂಗಳೂರಿನಲ್ಲಿ ನೈಟ್, ವೀಕೆಂಡ್ ಕರ್ಫ್ಯೂಗೆ ಜನಾಕ್ರೋಶ

ಆಸ್ತಿ ಸಿಕ್ಕಿದ ಬಳಿಕ ತಾಯಿ ಬೇಡವಾದಳು: ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಾಯಿ

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಸಚಿವರಿಂದಲೇ ವಿರೋಧ!

ಇತ್ತೀಚಿನ ಸುದ್ದಿ