ಭೀಕರ ಅಪಘಾತ; ಇಬ್ಬರು ಸ್ಥಳದಲ್ಲಿಯೇ ಸಾವು | ರಸ್ತೆಯಲ್ಲಿ ಹೊತ್ತಿ ಉರಿದ ಬೈಕ್ - Mahanayaka

ಭೀಕರ ಅಪಘಾತ; ಇಬ್ಬರು ಸ್ಥಳದಲ್ಲಿಯೇ ಸಾವು | ರಸ್ತೆಯಲ್ಲಿ ಹೊತ್ತಿ ಉರಿದ ಬೈಕ್

tumakur
07/06/2021


Provided by

ತುಮಕೂರು:  ಭೀಕರ ಅಪಘಾತವೊಂದರಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿಯಲ್ಲಿ ಸೋಮವಾರ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು,  ಲಾರಿ ಹಾಗೂ ಬೈಕ್ ನಡುವೆ ಭೀಕರವಾಗಿ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ರಸ್ತೆಯಲ್ಲಿಯೇ ಬೈಕ್ ಹೊತ್ತಿ ಉರಿದುಹೋಗಿದೆ.

ಅಪಘಾತದ ಪರಿಣಾಮ 30 ವರ್ಷ ವಯಸ್ಸಿನ  ರಾಮಚಂದ್ರ ಹಾಗೂ 25 ವರ್ಷ ವಯಸ್ಸಿನ ಪ್ರಿಯಾ ಮೃತಪಟ್ಟಿದ್ದು, ಇವರಿಬ್ಬರೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಮೂಲದವರು ಎಂದ ತಿಳಿದು ಬಂದಿದೆ.

ಮೃತಪಟ್ಟವರು ಅಂಚೆ ಕಚೇರಿಯಲ್ಲ ಕೆಲಸ ನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.  ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ