ಸರಿಯಾಗಿ ಅಡುಗೆ ಮಾಡಲಿಲ್ಲ ಎಂದು ಅಜ್ಜಿಯ ಮೇಲೆ ಹಲ್ಲೆ: ಪತಿ, ಪತ್ನಿ ಅರೆಸ್ಟ್ - Mahanayaka

ಸರಿಯಾಗಿ ಅಡುಗೆ ಮಾಡಲಿಲ್ಲ ಎಂದು ಅಜ್ಜಿಯ ಮೇಲೆ ಹಲ್ಲೆ: ಪತಿ, ಪತ್ನಿ ಅರೆಸ್ಟ್

28/03/2024

ವೃದ್ಧೆಯೊಬ್ಬರನ್ನು ಮೊಮ್ಮಗ ಮತ್ತು ಆತನ ಪತ್ನಿ ಥಳಿಸಿದ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ದಂಪತಿಯನ್ನು ಬಂಧಿಸಲಾಗಿದೆ. ವೃದ್ಧೆ ತಯಾರಿಸಿದ ಆಹಾರ ಇಷ್ಟವಾಗದ ಕಾರಣ ಆರೋಪಿಗಳು ಆಕೆಯನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವೃದ್ಧ ಮಹಿಳೆಯ ಮೇಲೆ ಪುರುಷ ಮತ್ತು ಮಹಿಳೆ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಈ ವೀಡಿಯೊದಲ್ಲಿ ವ್ಯಕ್ತಿಯು ತನ್ನ ತೋಳುಗಳನ್ನು ವೃದ್ಧ ಮಹಿಳೆಯ ಕುತ್ತಿಗೆಯ ಸುತ್ತಲೂ ಇಟ್ಟುಕೊಂಡಿದ್ರೆ ಅವನ ಒಂದು ಕೈ ಅಜ್ಜಿಯ ಬಾಯಿಯ ಮೇಲೆ ಇಡಲಾಗಿದೆ.

ಹಾಸಿಗೆಯ ಮೇಲೆ ಕುಳಿತಿರುವ ಇನ್ನೊಬ್ಬ ಮಹಿಳೆ, ವೃದ್ಧರ ಮೇಲೆ ಕೋಲಿನಿಂದ ನಿರಂತರವಾಗಿ ಹಲ್ಲೆ ನಡೆಸುತ್ತಾಳೆ.
ಈ ವಿಡಿಯೋವನ್ನು ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ.

ಆರೋಪಿಗಳನ್ನು ದೀಪಕ್ ಸೇನ್ ಮತ್ತು ಅವರ ಪತ್ನಿ ಪೂಜಾ ಸೇನ್ ಎಂದು ಗುರುತಿಸಲಾಗಿದೆ. ದೀಪಕ್ ಸೇನ್ ಭೋಪಾಲ್ ನ ಬರ್ಖೇಡಿ ಪ್ರದೇಶದಲ್ಲಿ ಸಲೂನ್ ನಡೆಸುತ್ತಿದ್ದಾರೆ. ವೀಡಿಯೊ ಪ್ರಸಾರವಾದ ನಂತರ, ದಂಪತಿ ಭೋಪಾಲ್‌ನಿಂದ ಝಾನ್ಸಿಯತ್ತ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಪೊಲೀಸರು ತಡೆದು ಬಂಧಿಸಿದರು. ಆರೋಪಿಗಳನ್ನು ಭೋಪಾಲ್ ಗೆ ಕರೆತರಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ