ಕೇಜ್ರಿವಾಲ್ ಜಾಮೀನಿಗೆ ತಡೆ: ಪತಿಯನ್ನು 'ಉಗ್ರಗಾಮಿ'ಯಂತೆ ನೋಡಲಾಗ್ತಿದೆ ಎಂದು ಪತ್ನಿ ಸುನೀತಾ ಆಕ್ರೋಶ - Mahanayaka

ಕೇಜ್ರಿವಾಲ್ ಜಾಮೀನಿಗೆ ತಡೆ: ಪತಿಯನ್ನು ‘ಉಗ್ರಗಾಮಿ’ಯಂತೆ ನೋಡಲಾಗ್ತಿದೆ ಎಂದು ಪತ್ನಿ ಸುನೀತಾ ಆಕ್ರೋಶ

21/06/2024


Provided by

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಗೆ ದಿಲ್ಲಿಯ ರೌಸ್ ಅವೆನ್ಯೂ ಮಂಜೂರು ಮಾಡಿರುವ ಜಾಮೀನನ ಬಿಡುಗಡೆಗೆ ದಿಲ್ಲಿ ಹೈಕೋರ್ಟ್ ತಡೆ ನೀಡಿದೆ. ಇದರ ಹಿಂದೆಯೇ ಪ್ರತಿಕ್ರಿಯಿಸಿರುವ ಸುನೀತಾ ಕೇಜ್ರಿವಾಲ್, ತಮ್ಮ ಪತಿಯನ್ನು ಕೇಂದ್ರ ಸರಕಾರ ಹಾಗೂ ಅದರ ಕೇಂದ್ರೀಯ ತನಿಖಾ ಸಂಸ್ಥೆಗಳು ಉಗ್ರಗಾಮಿಯಂತೆ ನಡೆಸಿಕೊಳ್ಳುತ್ತಿವೆ ಎಂದು ಹರಿಹಾಯ್ದಿದ್ದಾರೆ.

ಅರವಿಂದ್‌ ಕೇಜ್ರಿವಾಲ್ ರಿಗೆ 1 ಲಕ್ಷ ರೂ. ಬಾಂಡ್‌ನ ಮೇಲೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಇಂದು ಈಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅರವಿಂದ್ ಕೇಜ್ರಿವಾಲ್ ರಿಗೆ ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದ ಮಂಡಿಸಿದರು. ಈ ವಾದವನ್ನು ಅರವಿಂದ್ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಿರೋಧಿಸಿದರು.

ಈ ವಿಚಾರದ ಕುರಿತು ನ್ಯಾಯಾಲಯವು ವಿಚಾರಣೆ ನಡೆಸುವವರೆಗೂ, ಜಾಮೀನು ಆದೇಶವನ್ನು ಜಾರಿಗೊಳಿಸಲು ಅವಕಾಶ ನೀಡಬಾರದು ಎಂದು ಹೈಕೋರ್ಟ್ ಸೂಚಿಸಿತು.

ಅರವಿಂದ್ ಕೇಜ್ರಿವಾಲ್ ರಿಗೆ ಜಾಮೀನು ಮಂಜೂರಾಗಿರುವ ಆದೇಶದ ಪ್ರತಿಯು ಅಪ್ಲೋಡ್ ಆಗುವುದಕ್ಕೂ ಮುಂಚೆಯೇ ಜಾರಿ ನಿರ್ದೇಶನಾಲಯವು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದೆ ಎಂಬುದರತ್ತ ಬೊಟ್ಟು ಮಾಡಿರುವ ಸುನೀತಾ ಕೇಜ್ರಿವಾಲ್, ದೇಶದಲ್ಲಿ ಸರ್ವಾಧಿಕಾರ ಹೆಚ್ಚುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ