ಮಹಾಲಕ್ಷ್ಮೀ ಕೇಸ್ ಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ಸಿಕ್ಕಿಬೀಳುವ ಮುನ್ನವೇ ಆರೋಪಿ ಪರಲೋಕಕ್ಕೆ ಪರಾರಿ! - Mahanayaka
2:31 PM Wednesday 17 - September 2025

ಮಹಾಲಕ್ಷ್ಮೀ ಕೇಸ್ ಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ಸಿಕ್ಕಿಬೀಳುವ ಮುನ್ನವೇ ಆರೋಪಿ ಪರಲೋಕಕ್ಕೆ ಪರಾರಿ!

mahalakshmi case
25/09/2024

ಬೆಂಗಳೂರು:  ವೈಯಾಲಿಕಾವಲ್ ನಲ್ಲಿ ನಡೆದ ಮಹಾಲಕ್ಷ್ಮೀಯ ಬರ್ಬರ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಮಹಾಲಕ್ಷ್ಮೀಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಾವಿಗೀಡಾಗಿರುವುದು ಬಯಲಿಗೆ ಬಂದಿದೆ.


Provided by

ಮಹಾಲಕ್ಷ್ಮೀ ಪ್ರಕರಣದ ಶಂಕಿತ ಆರೋಪಿ ಮುಕ್ತಿ ರಂಜನ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಆರೋಪಿ ಒಡಿಶಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಆತನ ಬಂಧನಕ್ಕೆ ಸಿದ್ಧತೆ ನಡೆಸಿದ್ದರು. ಇನ್ನೇನು ಆತನನ್ನು ಬಂಧಿಸಬೇಕು ಅನ್ನೋವಷ್ಟರಲ್ಲಿ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಫ್ಯಾಕ್ಟರಿಯಲ್ಲಿ ಟೀಮ್ ಹೆಡ್ ಆಗಿದ್ದ ಎನ್ನಲಾಗಿದೆ. ಸೆಪ್ಟಂಬರ್ 1ರಂದು ಇಬ್ಬರು ಕೆಲಸಕ್ಕೆ ಬಂದಿದ್ದರು. ಮರುದಿನ ಒಟ್ಟಿಗೆ ವೀಕ್ಲಿ ಆಫ್ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಇನ್ನೂ ತಾಯಿಗೆ ಕರೆ ಮಾಡಿದ್ದ ಮಹಾಲಕ್ಷ್ಮೀ ಮನೆಗೆ ಬರುವುದಾಗಿಯೂ ಹೇಳಿದ್ರಂತೆ,  ಆದ್ರೆ ಅಷ್ಟರಲ್ಲೇ ಮುಕ್ತಿ ರಂಜನ್ ರಾಯ್ ಮಹಾಲಕ್ಷ್ಮೀಯನ್ನ ಬರ್ಬರವಾಗಿ ಹತ್ಯೆ ಮಾಡಿರುವುದೇ ಅಲ್ಲದೇ ಆಕೆಯ ದೇಹವನ್ನು 50ಕ್ಕೂ ಹೆಚ್ಚು ಪೀಸ್ ಮಾಡಿ, ಪರಾರಿಯಾಗಿದ್ದ.

ಮಹಾಲಕ್ಷ್ಮೀ ಹತ್ಯೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಹಂತಕನ ಜಾಡು ಹಿಡಿದು ಬಂಧನಕ್ಕೆ ಸಿದ್ಧತೆಯನ್ನೂ ನಡೆಸಿದ್ದರು. ಭೀಕರವಾಗಿ ಹೆಣ್ಣೊಬ್ಬಳನ್ನು ಹತ್ಯೆ ಮಾಡುವಷ್ಟು ಧೈರ್ಯವಿದ್ದ ಆರೋಪಿಗೆ ಪೊಲೀಸರ ವಿಚಾರಣೆಯನ್ನು ಎದುರಿಸುವ ಧೈರ್ಯವಿರಲಿಲ್ಲವೇನೋ, ಅಷ್ಟರಲ್ಲೇ ಇದೀಗ ನರಕದ ಕದ ತಟ್ಟಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ