‘ಬಿಗ್ ಬಾಸ್’ ನ ಮ್ಯಾನೇಜರ್ ಅಪಘಾತದಲ್ಲಿ ಸಾವು
16/01/2021
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 14ನೇ ಆವೃತ್ತಿಯ ಮ್ಯಾನೇಜರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, 24 ವರ್ಷದ ಪಿಸ್ತಾ ಧಾಕಡ್ ಮೃತಪಟ್ಟವರಾಗಿದ್ದಾರೆ.
ತಮ್ಮ ಸಹಾಯಕಿಯ ಜೊತೆಗೆ ಪಿಸ್ತಾ ಆ್ಯಕ್ಟಿವಾ ಹೋಂಡಾದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹೊಂಡವೊಂದಕ್ಕೆ ಆ್ಯಕ್ಟಿವಾ ಬಿದ್ದಿದ್ದು, ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾನ್ ವೊಂದರಡಿಗೆ ಧಾಕಡ್ ಬಿದ್ದಿದ್ದಾರೆ. ವ್ಯಾನ್ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಿಗ್ ಬಾಸ್ ಮಾತ್ರವಲ್ಲದೇ ಖತರೋ ಕಿ ಕಿಲಾಡಿ, ದ ವೈಸ್ ಸೇರಿದಂತೆ ಸಾಕಷ್ಟು ಜನಪ್ರಿಯ ಶೋಗಳಲ್ಲಿ ಪಿಸ್ತಾ ಕೆಲಸ ಮಾಡಿದ್ದಾರೆ. ಪಿಸ್ತಾ ನಿಧನಕ್ಕೆ ಸಂತಾಪ ಸೂಚಿಸಿ ಅನೇಕ ಸೆಲೆಬ್ರಿಟಿಗಳು, ಬಿಗ್ ಬಾಸ್ ಮಾಜಿ ಸ್ಪರ್ಧೆಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.



























