'ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯೋಕೆ ಬರಲ್ವಾ?' ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಟ್ರೋಲ್ ಸುರಿಮಳೆ! - Mahanayaka
12:01 AM Tuesday 13 - January 2026

‘ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯೋಕೆ ಬರಲ್ವಾ?’ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಟ್ರೋಲ್ ಸುರಿಮಳೆ!

ashwini gowda
13/01/2026

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಮನೆಯ ಪ್ರಬಲ ಸ್ಪರ್ಧಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಮಹಿಳಾ ಘಟಕದ ಗೌರವಾಧ್ಯಕ್ಷೆ ಅಶ್ವಿನಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ತಾವು ಬರೆದ ಹ್ಯಾಶ್‌ಟ್ಯಾಗ್‌ನಲ್ಲಿ ಕನ್ನಡದ ಅಕ್ಷರಗಳನ್ನು ತಪ್ಪಾಗಿ ಬರೆದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಏನಿದು ಘಟನೆ? ಬಿಗ್ ಬಾಸ್ ಫಿನಾಲೆ ವಾರದ ಅಂಗವಾಗಿ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಆಟಕ್ಕೆ ಸರಿಹೊಂದುವ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಳ್ಳಲು ಬಯಸುವ ಹ್ಯಾಶ್‌ಟ್ಯಾಗ್‌ಗಳನ್ನು ಬೋರ್ಡ್ ಮೇಲೆ ಬರೆಯಬೇಕಿತ್ತು. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರು ತಮ್ಮನ್ನು ‘ಛಲಗಾರ್ತಿ’ ಎಂದು ಗುರುತಿಸಿಕೊಳ್ಳಲು ಬಯಸಿದ್ದರು.

ಆದರೆ, ಬೋರ್ಡ್ ಮೇಲೆ ಬರೆಯುವಾಗ ಮೊದಲು ‘ಲಗಾರ್ಥಿ‘ ಎಂದು ಬರೆದು, ನಂತರ ಅದನ್ನು ತಿದ್ದಿ ‘ಚಲಗಾರ್ತಿ’ ಎಂದು ಬರೆಯಲಾಗಿದೆ. ಕನ್ನಡದ ನಿಯಮದ ಪ್ರಕಾರ ಅದು ‘ಛಲಗಾರ್ತಿ’ ಎಂದಾಗಬೇಕು. ಅಷ್ಟೇ ಅಲ್ಲದೆ, ಮತ್ತೊಂದು ಹ್ಯಾಶ್‌ಟ್ಯಾಗ್‌ನಲ್ಲಿ ‘#ಹಠವಾದಿ’ ಎಂದು ಬರೆಯುವ ಬದಲು ‘#ಹಠವಾಧಿ‘ ಎಂದು ಬರೆದಿರುವುದು ಪ್ರೇಕ್ಷಕರ ಕಣ್ಣಿಗೆ ಬಿದ್ದಿದೆ.

ಕನ್ನಡ ಹೋರಾಟಗಾರ್ತಿ ಎಂದು ಗುರುತಿಸಿಕೊಳ್ಳುವ ಅಶ್ವಿನಿ ಅವರಿಗೆ ಮೂಲ ಕನ್ನಡ ಪದಗಳನ್ನೇ ಸರಿಯಾಗಿ ಬರೆಯಲು ಬರುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ