ಸ್ಪಲ್ಪದರಲ್ಲೇ ಬಚಾವ್: ಪಾಟ್ನಾ ವಿವಿಯಲ್ಲಿ ಹಠಾತ್ತನೇ ಜಾರಿಬಿದ್ದ ಬಿಹಾರ ಸಿಎಂ; ವೀಡಿಯೋ ವೈರಲ್ - Mahanayaka

ಸ್ಪಲ್ಪದರಲ್ಲೇ ಬಚಾವ್: ಪಾಟ್ನಾ ವಿವಿಯಲ್ಲಿ ಹಠಾತ್ತನೇ ಜಾರಿಬಿದ್ದ ಬಿಹಾರ ಸಿಎಂ; ವೀಡಿಯೋ ವೈರಲ್

05/09/2023

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾ ವಿಶ್ವವಿದ್ಯಾನಿಲಯದ ವೇದಿಕೆ ಮೇಲೆ ಹಠಾತ್ ಆಗಿ ಜಾರಿ ಬಿದ್ದ ಘಟನೆ ನಡೆದಿದೆ. ನೂತನ ಸೆನೆಟ್ ಸಭಾಂಗಣ ಉದ್ಘಾಟನೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ಅವರು ಬಂದಿದ್ದರು.

ಕೆಳಗೆ ಬಿದ್ದ ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನು ಹಿಡಿದರು. ಅವರಿಗೆ ಯಾವುದೇ ರೀತಿಯ ಗಾಯ ಆಗಿಲ್ಲ. ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಇಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಉಪಸ್ಥಿತರಿದ್ದರು. ಸಿಎಂ ನಿತೀಶ್ ಮತ್ತು ರಾಜ್ಯಪಾಲರು ಪಿಯುನಲ್ಲಿ ನೂತನವಾಗಿ ಅಲಂಕರಿಸಿದ ಸೆನೆಟ್ ಹಾಲ್ ಅನ್ನು ಸಹ ಉದ್ಘಾಟಿಸಿದರು. ಉದ್ಘಾಟನೆಗೆ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ವೇದಿಕೆ ತಲುಪುತ್ತಿದ್ದಂತೆಯೇ ಅವರ ಕಾಲು ಜಾರಿತು.

ಮರುಕ್ಷಣವೇ ಮುಖ್ಯಮಂತ್ರಿ ತತ್ತರಿಸಿ ವೇದಿಕೆ ಮೇಲೆ ಬಿದ್ದರು. ಇದನ್ನು ನೋಡಿ ಅಲ್ಲಿದ್ದವರೆಲ್ಲ ಸ್ತಬ್ಧರಾದರು. ಆದರೆ ಭದ್ರತಾ ಸಿಬ್ಬಂದಿ ತಕ್ಷಣವೇ ಸಿಎಂ ನಿತೀಶ್ ಅವರನ್ನು ನಿಭಾಯಿಸಿ ನಿಲ್ಲುವಂತೆ ಮಾಡಿದರು. ಸಿಎಂಗೆ ಯಾವುದೇ ರೀತಿಯ ಗಾಯವಾಗದಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮುಖ್ಯಮಂತ್ರಿ ಸಾವಧಾನವಾಗಿ ಎದ್ದು ರಾಜ್ಯಪಾಲ ಅರ್ಲೇಕರ್ ಬಳಿ ಬಂದರು. ಇದಾದ ನಂತರ ಇಬ್ಬರೂ ಸೆನೆಟ್ ಸಭಾಂಗಣವನ್ನು ಉದ್ಘಾಟಿಸಿದರು. ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚಿನ ಸುದ್ದಿ