ಬಿಹಾರ: ನೆಲಕಚ್ಚಿದ ಮಹಾಘಟಬಂಧನ್‌: ಮೀಮ್ ಗಳಿಗೆ ಆಹಾರವಾದ ರಾಹುಲ್ ಗಾಂಧಿ - Mahanayaka
10:51 PM Friday 14 - November 2025

ಬಿಹಾರ: ನೆಲಕಚ್ಚಿದ ಮಹಾಘಟಬಂಧನ್‌: ಮೀಮ್ ಗಳಿಗೆ ಆಹಾರವಾದ ರಾಹುಲ್ ಗಾಂಧಿ

rahulgandhi bihar
14/11/2025

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಇಂಡಿಯಾ ಒಕ್ಕೂಟದ ಮಹಾಘಟಬಂಧನ್‌ ಹೀನಾಯ ಸೋಲು ಕಂಡಿದೆ.

ಗೆಲುವಿನ ಬೆನ್ನಲ್ಲೇ  ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ  ಮೀಮ್ ಗಳು ಹರಿದಾಡುತ್ತಿವೆ. ಬಿಜೆಪಿಯ ಅಸ್ಸಾಂ ಘಟಕ, `ಧನ್ಯವಾದಗಳು ಬಿಹಾರ, 2026ರಲ್ಲಿ ಮತ್ತೊಮ್ಮೆ ಸಂಭ್ರಮಿಸೋಣ’ ಎಂದು ಬರೆದುಕೊಂಡಿದೆ. ಮತ್ತೊಂದು ಪೋಸ್ಟ್‌ ನಲ್ಲಿ ಮಕ್ಕಳ ದಿನದಂದು ‘ರಾಷ್ಟ್ರೀಯ ಮಗು’ವನ್ನು ಅಸಮಾಧಾನಗೊಳಿಸಿದ್ದಕ್ಕಾಗಿ ಕ್ಷಮೆಯಿರಲಿ ಎನ್ನುವ ಮೀಮ್ ಹಂಚಿಕೊಂಡಿದೆ.

ಪಶ್ಚಿಮ ಬಂಗಾಳ ಬಿಜೆಪಿ, ಮುಂದೆ ಪಶ್ಚಿಮ ಬಂಗಾಳದಲ್ಲಿ ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ, ಬಿಜೆಪಿ ಇನ್ನೂ ಬಂಗಾಳದಲ್ಲಿ ಜಯ ಸಾಧಿಸಲು ಕಾಯುತ್ತಿದೆ ಎಂದು ಬರೆದುಕೊಂಡು ಕುರ್ಚಿಯ ಚಿತ್ರವನ್ನು ಹಂಚಿಕೊಂಡಿದೆ.

ಇನ್ನೊಂದು ಪೋಸ್ಟ್‌ನಲ್ಲಿ ಬಿಜೆಪಿ, ವಾತಾವರಣದಲ್ಲಿ ಕೆಲವೊಮ್ಮೆ ಬೆಳಕು, ಕೆಲವೊಮ್ಮೆ ನೆರಳು ಇರುತ್ತದೆ, ಆದರೆ ರಾಹುಲ್ ಗಾಂಧಿಯವರಿಗೂ ದೇಶವು ಅದೇ ವಾತಾವರಣವನ್ನು ಕಾಯ್ದುಕೊಂಡಿದೆ ಎಂದು ಬರೆದುಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ