ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದ ಬಿಜೂರು ಆಟೋ ಚಾಲಕರ ಮತ್ತು ಮಾಲಕರ ಸಂಘ - Mahanayaka

ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದ ಬಿಜೂರು ಆಟೋ ಚಾಲಕರ ಮತ್ತು ಮಾಲಕರ ಸಂಘ

bejur
15/08/2023


Provided by

ಕೆನರಾ ಬ್ಯಾಂಕ್ ಅಧಿಕಾರಿಯಾದ ವಿಜಯ್ ಕುಮಾರ್ ಬೆಸ್ಕೂರ್ ರವರು ಧ್ವಜಾರೋಹಣವನ್ನು ನೆರವೇರಿಸಿ ನಾವು ನಮ್ಮ ನಡುವೆ ಮತ್ತು  ನೆರೆಹೊರೆಯವರೊಂದಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಬೇಕು. ನಮ್ಮ ಸಮಾಜದಿಂದ ಬಡತನ, ಅನಕ್ಷರತೆ, ಭ್ರಷ್ಟಾಚಾರ, ಹಿಂಸೆ ಮತ್ತು ತಾರತಮ್ಯವನ್ನು ತೊಡೆದುಹಾಕಲು ನಾವು ಶ್ರಮಿಸಬೇಕು. ರಾಷ್ಟ್ರ ಮತ್ತು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ನಾವು ಕೊಡುಗೆ ನೀಡಬೇಕು ಎಂದು ಹೇಳಿದರು

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮೀನಾಕ್ಷಿ  ವಿಜಯಕುಮಾರ್ ಬೆಸ್ಕೂರ್ ರವರು ಪ್ರತಿವರ್ಷದಂತೆ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಅಭಿಜಿತ್ ಪೂಜಾರಿ,ಬಾ.ಜ.ಪ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ಬೆಸ್ಕೂರ್,ಶ್ರೀ ಕಮಲೇಶ್ ಬೆಸ್ಕೂರ್, ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಪುರುಷೋತ್ತಮದಾಸ್,ರಥಬೀದಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಶೇರಿಗಾರ್,ಶಾಲಾಭಿವ್ರದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಖಾರ್ವಿ,ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಂಗಾದರ್ ದೇವಾಡಿಗ, ಸ್ಥಳೀಯರಾದ ಚೆನ್ನಯ್ಯ ಪೂಜಾರಿ,ಶ್ರೀ ಪಾಂಡುರಂಗ ಖಾರ್ವಿ,ಶ್ರೀ ಕೇಶವ ಪೈ,ಆಟೋ ಚಾಲಕರ ಮತ್ತು  ಮಾಲಕರ  ಸಂಘದ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು

ಗೌರವಾಧ್ಯಕ್ಷರಾದ ಶೇಖರ್ ಪೂಜಾರಿಯವರು  ಉಪಹಾರದ ವ್ಯವಸ್ಥೆ ಮಾಡಿದರು.ಗಣೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಭಾಸ್ಕರ ದೇವಾಡಿಗ ವಂದನಾರ್ಪಣೆಗೈದರು

ಇತ್ತೀಚಿನ ಸುದ್ದಿ