ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕಟ್ಟಡಗಳ ವಿನ್ಯಾಸಕಾರ ನಿಧನ - Mahanayaka
11:16 PM Wednesday 20 - August 2025

ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕಟ್ಟಡಗಳ ವಿನ್ಯಾಸಕಾರ ನಿಧನ

madhwaraj bhat
16/08/2022


Provided by

ಮಣಿಪಾಲದ ಆರ್ಕಿಟೆಕ್ಟ್ ಡಿಪಾರ್ಟ್ಮೆಂಟ್ ನ ನಿವೃತ್ತ ಉದ್ಯೋಗಿ, ಕಟ್ಟಡಗಳ ವಿನ್ಯಾಸಕಾರ ಮಧ್ವರಾಜ್ ಭಟ್ ರವರು ಇಂದು ಬೆಳಿಗ್ಗೆ ನಿಧನರಾದರು.

ಮಧ್ವರಾಜ್ ಅವರು ಆ‌.13ರಂದು ಪೆರ್ಡೂರಿನ ಪಕ್ಕಾಲು ಬಳಿ ನಡೆದ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ವರಾಜ್ ಭಟ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಮಧ್ವರಾಜ್ ಭಟ್ ಅವರು ಶ್ರೀಕೃಷ್ಣ ಮಠದ ಸುತ್ತು ಪೌಳಿಯ ನಿರ್ಮಾಣ ಕಾರ್ಯದಲ್ಲಿ, ರಾಜಾಂಗಣ, ಗೀತಾ ಮಂದಿರ ನಿರ್ಮಾಣ ಸಂಧರ್ಭ ವಿಶೇಷ ಮುತುವರ್ಜಿ ವಹಿಸಿದ್ದರು. ಇವರಿಗೆ ಪೇಜಾವರ ಹಿರಿಯ ಶ್ರೀಗಳು  ಶ್ರೀಕೃಷಾನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು. ನೇಪಾಳ, ಗುಜರಾತ್ ನ ದ್ವಾರಕಾ, ದ.ಕ, ಉಡುಪಿ, ಬೆಂಗಳೂರು, ಕೋಲಾರ,ಕುಂಭಾಶಿ ಅಯ್ಯಪ್ಪ ಸ್ವಾಮಿ ದೇವಾಲಯ, ಸಹಿತ  ಹಲವೆಡೆ ದೇವಸ್ಥಾನ ಮತ್ತು ಮಠಗಳ ಮರು ನಿರ್ಮಾಣದ ಕಾಮಗಾರಿಗೆ ನಕ್ಷೆ ಗಳನ್ನು ತಯಾರಿಸಿ ಕಟ್ಟಡಗಳ ನಿರ್ಮಾಣಕ್ಕೆ  ರೂಪು ರೇಷೆಗಳನ್ನು ತಯಾರಿಸಿಕೊಡುತ್ತಿದ್ದರು. ಮೃತರು ಪತ್ನಿ,ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ