ಬೈಕ್ ಗೆ ಕಾರು ಡಿಕ್ಕಿ: ಪ್ಲೈಓವರ್​​  ನಿಂದ  ಕೆಳಗೆ ಬಿದ್ದು ಸವಾರ ಸಾವು - Mahanayaka
12:23 AM Wednesday 15 - October 2025

ಬೈಕ್ ಗೆ ಕಾರು ಡಿಕ್ಕಿ: ಪ್ಲೈಓವರ್​​  ನಿಂದ  ಕೆಳಗೆ ಬಿದ್ದು ಸವಾರ ಸಾವು

bangalore
22/05/2022

ಬೆಂಗಳೂರು: ನಗರದ ಏರ್ ​​ಪೋರ್ಟ್​​ ಪ್ಲೈಓವರ್​​ ನಿಂದ ಬೈಕ್ ಸವಾರ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜಕ್ಕೂರು ಏರೋಡ್ರಮ್ ಬಳಿ ನಡೆದಿದೆ.


Provided by

ಮೃತ ವ್ಯಕ್ತಿಯನ್ನು ಜಕ್ಕೂರು ಲೇಔಟ್ ನಿವಾಸಿ 44 ವರ್ಷ ವಯಸ್ಸಿನ ಗೋವಿಂದಪ್ಪ ಎಂದು ಗುರುತಿಸಲಾಗಿದ್ದು, ಇನ್ನು ಘಟನೆಯಲ್ಲಿ 14 ವರ್ಷದ ಬಾಲಕ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಏರ್ ಪೋರ್ಟ್​​ ಫ್ಲೇ ಓವರ್ ಮೇಲೆ  ಏರೋಡ್ರಮ್​​ ಬಳಿ ಗಾಡಿ ನಿಲ್ಲಿಸಿ ಬಾಲಕನಿಗೆ ಏರ್​​​ಪೋರ್ಟ್​​ ತೋರಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸೆಕ್ಕೆ ಗೋವಿಂದಪ್ಪ ಫ್ಲೇ ಓವರ್​ನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಕಾರು ಚಾಲಕ ವರುಣ್​ ಎಂಬಾತನನ್ನು ಕೆ.ಆರ್.ಪುರಂ ಬಳಿ   ಪೊಲೀಸರು ಬಂಧಿಸಿದ್ದಾರೆ. ಏರ್ ​​ಪೋರ್ಟ್​ನಿಂದ ಬೆಂಗಳೂರಿನ ಕಡೆ ಬರುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಇನ್ನು, ಬಂಧಿತ ಕಾರು ಚಾಲಕ ವರುಣ್ ಜೆ.ಸಿ. ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಪಘಾತ ಸಂದರ್ಭದಲ್ಲಿ ಕಾರಿನಲ್ಲಿ ಐವರು ಸ್ನೇಹಿತರೊಂದಿಗೆ ವರುಣ್ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಯುವತಿ ಆತ್ಮಹತ್ಯೆಗೆ ಶರಣು!

ಬಸ್ ರಿಪೇರಿ ಮಾಡುತ್ತಿದ್ದ ವೇಳೆ ಮೆಕಾನಿಕ್ ನ ದಾರುಣ ಸಾವು

ಏಕಲವ್ಯಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ  ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ

ಬಾತ್ ರೂಮ್ ನಲ್ಲಿ ಪತ್ತೆಯಾಯ್ತು 60 ಹಾವುಗಳು!

ಇತ್ತೀಚಿನ ಸುದ್ದಿ