ಕಸದ ಲಾರಿಗೆ ಮತ್ತೊಂದು ಬಲಿ:  ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯ ದಾರುಣ ಸಾವು - Mahanayaka
3:57 AM Tuesday 9 - September 2025

ಕಸದ ಲಾರಿಗೆ ಮತ್ತೊಂದು ಬಲಿ:  ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯ ದಾರುಣ ಸಾವು

nayandahalli
19/04/2022

ಬೆಂಗಳೂರು: ಕಸದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಗರದ ನಾಯಂಡಹಳ್ಳಿ ಬಳಿಯಲ್ಲಿ ನಡೆದಿದ್ದು, ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.


Provided by

ಸೇಂಟ್ ಮಾರ್ಕ್ ರಸ್ತೆಯಿಂದ ರಾಜರಾಜೇಶ್ವರಿ ನಗರಕ್ಕೆ ಹೋಗುತ್ತಿದ್ದ ಪದ್ಮಿನಿ ಎಂಬವರು ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಕಸದ ಲಾರಿಗಳು ಪದೇ ಪದೇ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವುದರ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಕೂಡ ಕೇಳಿ ಬಂದಿದೆ.

ಕಸದ ಲಾರಿಗಳ ನಿರ್ವಹಣೆಯ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳದ ಬಿಬಿಎಂಪಿ ಜನರ ಪ್ರಾಣ ಬಲಿ ಪಡೆದ ಬಳಿಕ ಎಚ್ಚೆತ್ತುಕೊಂಡಿದ್ದು, ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗೃತಾ ಕ್ರಮಕ್ಕೆ ಸೂಚನೆ ನೀಡಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದು, ಎಲ್ಲ ಕಾಂಪ್ಯಾಕ್ಟರ್, ಟಿಪ್ಪರ್ ಗಳು ಫಿಟ್ ನೆಸ್ ಸರ್ಟಿಫಿಕೆಟ್ ಹೊಂದಿರಬೇಕು. ಜೊತೆಗೆ ವೇಗ ನಿಯಂತ್ರಕ ಅಳವಡಿಸಿರಬೇಕು ಎಂದು ಆದೇಶ ಹೊರಡಿಸಿದ್ದಾರೆ.’

ಈ ಆದೇಶವನ್ನು ಬಿಬಿಎಂಪಿ ಈ ಹಿಂದೆಯೇ ಹೊರಡಿಸಿದ್ದರೆ, ಅಮಾಯಕ ಜನರ ಪ್ರಾಣವಾದರೂ ಉಳಿಯುತ್ತಿತ್ತು. ಸರ್ಕಾರಗಳು ಪ್ರಾಣ ಬಲಿಯಾದ ಬಳಿಕವೇ ಯಾವುದಾದರೂ ಕ್ರಮಗಳನ್ನು ಕೈಗೊಳ್ಳುವುದೇ? ಎನ್ನುವ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಠಗಳಿಂದ ಕಮಿಷನ್ ವಸೂಲಿ: ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ತಾಳಿಕಟ್ಟುವ ಶುಭ ವೇಳೆ, ವರನನ್ನು ಎತ್ತಾಕೊಂಡು ಹೋದ ಪೊಲೀಸರು!

ಶಾಲೆಯ ಎದುರೇ 10ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಸ್ನೇಹಿತರು

ಆಕ್ಷೇಪಾರ್ಹ ಪೋಸ್ಟ್ ಹರಡಿದ ಬಜರಂಗದಳದ ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಹಿಂದುತ್ವದಿಂದ ಚುನಾವಣೆ ಗೆಲ್ಲಬಹುದು ಎನ್ನುವ ಬಿಜೆಪಿಯ ನಿರೀಕ್ಷೆಗೆ ಶಾಕ್ ನೀಡಿದ ಯಡಿಯೂರಪ್ಪ ಹೇಳಿಕೆ!

ಇತ್ತೀಚಿನ ಸುದ್ದಿ