ಮುಂದಿನ ಚುನಾವಣೆಗಳಲ್ಲಿ ಬಿಲ್ಲವ ಯುವಕರಿಗೆ ಅವಕಾಶ ಕೊಡಿ: ಬಿ.ಜನಾರ್ಧನ ಪೂಜಾರಿ ಕರೆ - Mahanayaka
8:09 PM Saturday 18 - October 2025

ಮುಂದಿನ ಚುನಾವಣೆಗಳಲ್ಲಿ ಬಿಲ್ಲವ ಯುವಕರಿಗೆ ಅವಕಾಶ ಕೊಡಿ: ಬಿ.ಜನಾರ್ಧನ ಪೂಜಾರಿ ಕರೆ

janardhana poojary
22/01/2023

ಬೆಳ್ತಂಗಡಿ: ಮುಂದಿನ ಚುನಾವಣೆಗಳಲ್ಲಿ ಬಿಲ್ಲವ ಸಮುದಾಯದ  ಯುವಕರಿಗೆ ಅವಕಾಶ ನೀಡಿ ಎಂದು ಮಾಜಿ ಕೇಂದ್ರ ಸಚಿವ ಬಿ ಜನಾರ್ಧನ ಪೂಜಾರಿ ಕರೆ ನೀಡಿದ್ದಾರೆ.


Provided by

ಬೆಳ್ತಂಗಡಿಯ ಗುರುದೇವ ಕಾಲೇಜಿನ ಆವರಣದಲ್ಲಿ  ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಹಾಗೂ ಸಹ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಬೆಳ್ತಂಗಡಿಯಲ್ಲಿ ವಸಂತ ಬಂಗೇರರಂತಹ ಹಿರಿಯರು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ರಕ್ಷಿತ್ ಶಿವರಾಂ, ಪದ್ಮರಾಜರು, ಸಂಪತ್ ಸುವರ್ಣರಂತಹ ಯುವಕರಿಗೆ ಅವಕಾಶ ನೀಡಲಿ ಎಂದು ಕರೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ