ಸೀಮಾಂತ ಕಾರ್ಯಕ್ರಮದಲ್ಲಿ ಬಿರಿಯಾನಿ ತಿಂದು ಓರ್ವ ಸಾವು: 20ಕ್ಕೂ ಅಧಿಕ ಮಂದಿ ಅಸ್ವಸ್ಥ - Mahanayaka
1:39 AM Wednesday 10 - December 2025

ಸೀಮಾಂತ ಕಾರ್ಯಕ್ರಮದಲ್ಲಿ ಬಿರಿಯಾನಿ ತಿಂದು ಓರ್ವ ಸಾವು: 20ಕ್ಕೂ ಅಧಿಕ ಮಂದಿ ಅಸ್ವಸ್ಥ

biriyani
07/10/2022

ಚಿಕನ್ ಬಿರಿಯಾನಿ ಸೇವಿಸಿ ಓರ್ವ ವ್ಯಕ್ತಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ತಮಿಳುನಾಡಿನ ತಿರುವರೂರಿನಲ್ಲಿ ನಡೆದಿದೆ. ಅಸ್ವಸ್ಥಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು. ಅವರಿಗೆ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಲಂಗುಡಿಯ ಸೆಲ್ವಮುರುಗನ್ (24) ಮೃತಪಟ್ಟವರು ಎಂದು ಗುರುತಿಸಲಾಗಿದೆ. ತಿರುವಾರೂರು ಸಮೀಪದ ತಿರುವಾಸಲ್ ಪ್ರದೇಶದ ಚೆಲತುರೈ ಅವರ ಪುತ್ರ ವಿಘ್ನೇಶ್ ಅವರ ಪತ್ನಿ ಮರಿಯಮ್ಮಳ್ (26) ಅವರ ಸೀಮಂತ ಕಾರ್ಯಕ್ರಮ ಗುರುವಾರ ನಡೆದಿತ್ತು. ಕಾರ್ಯಕ್ರಮದಲ್ಲಿ ಐದು ಬಗೆಯ ಮಿಶ್ರ ಅನ್ನದೊಂದಿಗೆ ಬಿರಿಯಾನಿಯನ್ನೂ ಬಡಿಸಲಾಗಿತ್ತು.

ಬಿರಿಯಾನಿ ಸೇವನೆಯ ಬಳಿಕ 20ಕ್ಕೂ ಅಧಿಕ ಮಂದಿ  ಅಸ್ವಸ್ಥರಾಗಿದ್ದು, ಹಲವರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ. ಅಸ್ವಸ್ಥರ ಪೈಕಿ 12 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ ಆರು ಮಂದಿ ಐಸಿಯುವಿನಲ್ಲಿದ್ದಾರೆ.  ಗರ್ಭಿಣಿ ಮರಿಯಮ್ಮಳ್ ಸೇರಿದಂತೆ ಚಂಡೂರು(10) ಇಲಾರ (6) ಸೆಲ್ವಗಣಪತಿ(25) ಬಾಲಾಜಿ (22) ರಾಜಮಾಣಿಕ್ಕಂ (60) ಹಾಗೂ ನಾಲ್ಕು ವರ್ಷದ ಮಗು ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಆಹಾರದಲ್ಲಿ ಇಷ್ಟೊಂದು ಪ್ರಮಾಣದ ವಿಷ ಹೇಗೆ ಸೇರಿತು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಗಾಗಿ ಆಹಾರದ ಮಾದರಿಗಳನ್ನು ಪಡೆಯಲಾಗಿದೆ. ಜೊತೆಗೆ ಆಹಾರ ತಯಾರಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ