ಬಿರುಗಾಳಿ ಸಹಿತ ಭಾರೀ ಮಳೆ: ನೆಲಕ್ಕುರುಳಿದ 10 ವಿದ್ಯುತ್ ಕಂಬಗಳು! - Mahanayaka

ಬಿರುಗಾಳಿ ಸಹಿತ ಭಾರೀ ಮಳೆ: ನೆಲಕ್ಕುರುಳಿದ 10 ವಿದ್ಯುತ್ ಕಂಬಗಳು!

vijyapura
08/07/2021

ವಿಜಯಪುರ: ಬಿರುಗಾಳಿ ಸಹಿತ ಭಾರೀ ಮಳೆಗೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣ ಸೇರಿದಂತೆ ಹಲವೆಡೆಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ್ದು, ತೀವ್ರ ಹಾನಿ ಸಂಭವಿಸಿದೆ.


Provided by

 

ನಿನ್ನೆ ಸಂಜೆ ಆಲಮೇಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಪರಿಣಾಮ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸುಮಾರು 10ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾಗೂ ರಸ್ತೆ ಬದಿಯ ಮರಗಳು ನೆಲಕ್ಕುರುಳಿದೆ ಎಂದು ವರದಿಯಾಗಿದೆ.

 

ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿಯದೇ ರಸ್ತೆಗಳಲ್ಲಿಯೇ ನೀರು ರಸ್ತೆಯಲ್ಲಿಯೇ ಹರಿದಿದ್ದು, ರಸ್ತೆಗಳು ಹಳ್ಳಗಳಾಗಿತ್ತು. ಇನ್ನೂ ಆಲಮೇಲ-ಸಿಂದಗಿ ರಸ್ತೆ ಬದಿಯ ರೈತರ ಜಮೀನುಗಳಲ್ಲಿ ಮಳೆ ನೀರು ಬಂದು, ಜಮೀನುಗಳು ಕೆರೆಯಂತಾಗಿವೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ