ಬಿಜೆಪಿ ಬಡವರಿಂದ ಹಣ ಪಡೆದು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ - Mahanayaka
7:35 PM Thursday 16 - October 2025

ಬಿಜೆಪಿ ಬಡವರಿಂದ ಹಣ ಪಡೆದು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್

akolesh
27/02/2022

ಲಕ್ನೋ: ಬಿಜೆಪಿಯವರು ಬಡವರಿಂದ ಹಣವನ್ನು ಪಡೆದು ತಮ್ಮ ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಬಲರಾಮ್‍ಪುರದಲ್ಲಿ ಶನಿವಾರ ನಡೆದ ರ್‍ಯಾಲಿ ವೇಳೆ ಮಾತನಾಡಿದ ಅವರು, ಬಿಜೆಪಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೊಳಿಸಲು ತರಬೇತಿ ಪಡೆದಿದೆ. ಬಿಜೆಪಿಯವರು ಬಡವರಿಂದ ಹಣವನ್ನು ಪಡೆದು ತಮ್ಮ ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದ್ದಾರೆ. ಹಾಗಾಗಿ ಜನರು ಈ ಬಾರಿ ಸಮಾಜವಾದಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.


Provided by

ಪಯಾಗ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮುಖೇಶ್ ಶ್ರೀವಾಸ್ತವ ಅವರ ಪರ ಚುನಾವಣಾ ಪ್ರಚಾರ ನಡೆಸಿದರು. ಇದೇ ವೇಳೆ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಅನ್ನು ತುಂಬಾ ದುಬಾರಿ ಮಾಡಿದೆ. ಬಡ ಜನರು ತಮ್ಮ ವಾಹನಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ರೈತರು ಟ್ರ್ಯಾಕ್ಟರ್ ಓಡಿಸಲು ಸಾಧ್ಯವಾಗುತ್ತಿಲ್ಲ. ನೆನಪಿನಲ್ಲಿಟ್ಟುಕೊಳ್ಳಿ ಚುನಾವಣೆ ಮುಗಿದ ತಕ್ಷಣ ಬಿಜೆಪಿಯವರು ಪೆಟ್ರೋಲ್ ಬೆಲೆಯನ್ನು 200 ರೂ.ಗೆ ಏರಿಸುತ್ತಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ

ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ: ಇಬ್ಬರು ಆರೋಪಿಗಳಿಗೆ ಶರತ್ತುಬದ್ಧ ಜಾಮೀನು

ಕಾರು-ಬುಲೆಟ್​ ಡಿಕ್ಕಿ: ಇಬ್ಬರ ಸ್ಥಳದಲ್ಲೇ ಸಾವು

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿ ಸಾವು: ಇಬ್ಬರ ಬಂಧನ

ದಲಿತರು ಮಾಡಿ‌ ಕೊಟ್ಟ ಕಬ್ಬಿನ ಹಾಲು ಕುಡಿಯಬೇಕೆ..? ಎಂದು ಪ್ರಶ್ನಿಸಿ ಕಬ್ಬಿನ ಅಂಗಡಿ ಧ್ವಂಸ, ಹಲ್ಲೆ

 

ಇತ್ತೀಚಿನ ಸುದ್ದಿ