ಕೇರಳಕ್ಕೆ ವಿದೇಶಾಂಗ ಕಾರ್ಯದರ್ಶಿಯ‌ ನೇಮಕ: ಬಿಜೆಪಿ ಕೆಂಡಾಮಂಡಲ - Mahanayaka

ಕೇರಳಕ್ಕೆ ವಿದೇಶಾಂಗ ಕಾರ್ಯದರ್ಶಿಯ‌ ನೇಮಕ: ಬಿಜೆಪಿ ಕೆಂಡಾಮಂಡಲ

20/07/2024


Provided by

ಕೇರಳ ರಾಜ್ಯ ಸರ್ಕಾರವು ರಾಜ್ಯಕ್ಕೆ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಅತಿರೇಕ ಮತ್ತು ಸಂವಿಧಾನದ ಕೇಂದ್ರ ಪಟ್ಟಿಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಸುರೇಂದ್ರನ್ ಅವರು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, “ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಐಎಎಸ್ ಅಧಿಕಾರಿಯನ್ನು ಕೇರಳದಲ್ಲಿ ‘ವಿದೇಶಾಂಗ ಕಾರ್ಯದರ್ಶಿ’ ಆಗಿ ನೇಮಕ ಮಾಡಿರುವುದು ನಮ್ಮ ಸಂವಿಧಾನದ ಕೇಂದ್ರ ಪಟ್ಟಿಯ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.

ಈ ಕ್ರಮವನ್ನು “ಅಸಂವಿಧಾನಿಕ” ಎಂದು ಬಣ್ಣಿಸಿದ ಬಿಜೆಪಿ ನಾಯಕ, ಕೇರಳವನ್ನು “ಪ್ರತ್ಯೇಕ ರಾಷ್ಟ್ರ” ವಾಗಿ ಸ್ಥಾಪಿಸುವ ಉದ್ದೇಶವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಎಲ್ಡಿಎಫ್ ಸರ್ಕಾರಕ್ಕೆ ವಿದೇಶಾಂಗ ವ್ಯವಹಾರಗಳಲ್ಲಿ ಯಾವುದೇ ಜನಾದೇಶವಿಲ್ಲ. ಈ ಅಸಂವಿಧಾನಿಕ ಕ್ರಮವು ಅಪಾಯಕಾರಿ ಪೂರ್ವನಿದರ್ಶನವನ್ನು ರೂಪಿಸುತ್ತದೆ. ಕೇರಳಂ ಅನ್ನು ಪ್ರತ್ಯೇಕ ರಾಷ್ಟ್ರವಾಗಿ ಸ್ಥಾಪಿಸಲು ಸಿಎಂ @pinarayivijayan ಪ್ರಯತ್ನಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ