ಟಿವಿ ಡಿಬೇಟ್‌ನಲ್ಲಿ ಪ್ರಚೋದನಕಾರಿ ‌ಮಾತು: ಬಿಜೆಪಿ ನಾಯಕನಿಗೆ ಜಾಮೀನು ನಿರಾಕರಣೆ - Mahanayaka
5:03 AM Wednesday 17 - September 2025

ಟಿವಿ ಡಿಬೇಟ್‌ನಲ್ಲಿ ಪ್ರಚೋದನಕಾರಿ ‌ಮಾತು: ಬಿಜೆಪಿ ನಾಯಕನಿಗೆ ಜಾಮೀನು ನಿರಾಕರಣೆ

21/02/2025

ಟಿವಿ ಚಾನೆಲ್ ನ ಡಿಬೇಟ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದ ಕೇರಳದ ಬಿಜೆಪಿ ನಾಯಕ ಪಿಸಿ ಜಾರ್ಜ್ ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಜಸ್ಟೀಸ್ ಕುನ್ನಿಕೃಷ್ಣನ್ ಅವರು ಪಿಸಿ ಜಾರ್ಜ್ ಅವರಿಗೆ ಜಾಮೀನು ನಿರಾಕರಿಸಿದ್ದಾರೆ.
ಈ ಮೊದಲು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೂಡ ಇವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ಬಗೆಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಮತ್ತು ಸಮಾಜಕ್ಕೆ ಅಂತಹ ಸಂದೇಶ ಹೋಗಬಾರದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.


Provided by

ಜನವರಿ ಆರರಂದು ಜನಂ ಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಪಿಸಿ ಜಾರ್ಜ್ ಅವರು ದ್ವೇಷದ ಹೇಳಿಕೆಯನ್ನ ನೀಡಿದ್ದರು.
ಭಾರತದ ಮುಸ್ಲಿಮರೆಲ್ಲರೂ ಕೋಮುವಾದಿಗಳಾಗಿದ್ದಾರೆ. ಸಾವಿರಾರು ಹಿಂದೂ ಮತ್ತು ಕ್ರೈಸ್ತರ ಹತ್ಯೆ ನಡೆಸಿದ್ದಾರೆ. ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದವರು ಆಗ್ರಹಿಸಿದ್ದರು.

ಎಸ್ ಡಿ ಪಿ ಐ ಜಮಾಅತೆ ಇಸ್ಲಾಮಿ ಹಿಂದ್ ಮುಂತಾದವರೆಲ್ಲ ಸೇರಿ ಪಾಲಕ್ಕಾಡ್ ನಲ್ಲಿ ಬಿಜೆಪಿಯನ್ನು ಸೋಲಿಸಲು ಶ್ರಮಿಸಿದ್ದಾರೆ ಮುಸ್ಲಿಂ ಕೋಮುವಾದವನ್ನು ಸೃಷ್ಟಿಸಿ ನನ್ನನ್ನು ಸೋಲಿಸಲಾಗಿದೆ ಎಂದು ಪಿಸಿ ಜಾರ್ಜ್ ಚರ್ಚೆಯ ವೇಳೆ ಆರೋಪಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ