ಪತ್ನಿ, ಮಕ್ಕಳ ಎದುರೇ ಬಿಜೆಪಿ ನಾಯಕನ ಹತ್ಯೆ ಪ್ರಕರಣ: ಎಲ್ಲ 15 ಆರೋಪಿಗಳಿಗೂ ಮರಣದಂಡನೆ
30/01/2024
ಕೇರಳ: ಬಿಜೆಪಿ ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 15 ಮಂದಿ ಪಿಎಫ್ ಐ ಕಾರ್ಯಕರ್ತರಿಗೆ ಮರಣ ದಂಡನೆ ಶಿಕ್ಷೆ ಪ್ರಕಟಿಸಿದೆ.
ಬಿಜೆಪಿ ನಾಯಕ ರಂಜಿತ್ ಅವರನ್ನು ಪತ್ನಿ ಮಕ್ಕಳ ಎದುರೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 2021ರ ಡಿಸೆಂಬರ್ 19ರಂದು ಆಲಪುಝದ ರಂಜಿತ್ ಮನೆಯಲ್ಲಿ ಈ ಘಟನೆ ನಡೆದಿತ್ತು.
ಕೊಲೆಯಾದ ರಂಜಿತ್ ಶ್ರೀನಿವಾಸನ್ ಕೇರಳದ ಬಿಜೆಪಿಯ ಒಬಿಸಿ ನಾಯಕರಾಗಿದ್ದರು. ರಂಜಿತ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 15 ಅಪರಾಧಿಗಳಿಗೂ ಮರಣ ದಂಡನೆ ವಿಧಿಸಿದೆ.
ನೈಸಮ್, ಅಜ್ಮಲ್, ಅನೂಪ್, ಮಹಮ್ಮದ್ ಅಸ್ಲಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರ್ಪುದ್ದೀನ್, ಮನ್ಷದ್, ಜಸೀಬ್ ರಾಜಾ, ನವಾಸ್, ಸಮೀರ್, ನಝೀರ್, ಝಾಕೀರ್ ಹುಸೈನ್, ಶಾಜಿ ಪೂವತ್ತುಂಗಲ್ ಹಾಗೂ ಶ್ರೇನಸ್ ಅಶ್ರಫ್ ರಂಜೀತ್ ಶ್ರೀನಿವಾಸ್ ಪ್ರಕರಣದ ಆರೋಪಿಗಳಾಗಿದ್ದಾರೆ.




























