ಬಿಜೆಪಿಯ ಪ್ರಣಾಳಿಕೆ ಕಂಡು ಬೆಚ್ಚಿಬಿದ್ದ ತಮಿಳುನಾಡು ಬಿಜೆಪಿ ನಾಯಕರು | ಕಾರಣ ಏನು ಗೊತ್ತಾ? - Mahanayaka
4:05 AM Wednesday 15 - October 2025

ಬಿಜೆಪಿಯ ಪ್ರಣಾಳಿಕೆ ಕಂಡು ಬೆಚ್ಚಿಬಿದ್ದ ತಮಿಳುನಾಡು ಬಿಜೆಪಿ ನಾಯಕರು | ಕಾರಣ ಏನು ಗೊತ್ತಾ?

bjp tamilnadu
23/03/2021

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಿದ್ಧಪಡಿಸಿದ ಪ್ರಣಾಳಿಕೆಯನ್ನು ಕಂಡು  ತಮಿಳುನಾಡು ಬಿಜೆಪಿ ನಾಯಕರು ಹಾಗೂ ಬಿಜೆಪಿ ಮಿತ್ರ ಪಕ್ಷಕ್ಕೂ ಶಾಕ್ ನೀಡಿದ್ದು, ತಮ್ಮನ್ನು ಬೆಂಬಲಿಸಿದ್ದ ಸ್ವಲ್ಪ ಸಂಖ್ಯೆಯ ಜನರು ಕೂಡ ಪಕ್ಷದಿಂದ ಹೊರಟು ಹೋಗುವ ಆತಂಕವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ.


Provided by

ತಮಿಳುನಾಡಿನಲ್ಲಿ ಬಿಜೆಪಿ ಗೆದ್ದರೆ,  ಮತಾಂತರ ನಿಷೇಧ ಕಾನೂನು ತರಲಾಗುವುದು, ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ  ಜಲ್ಲಿಕಟ್ಟು ನಿಷೇಧ ಮಾಡುವುದು,  ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ತಪ್ಪಿಸುವುದು. ಗೋಶಾಲೆಗಳನ್ನು ನಿರ್ಮಿಸುವುದು. ಬ್ರಾಹ್ಮಣ ಪುರೋಹಿತರಿಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡುವುದು ಇವೇ ಮೊದಲಾದ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಬಿಜೆಪಿ ಕೇವಲ ಒಂದು ಸಮುದಾಯದ ಮಾನಸಿಕ ಸ್ಥಿತಿಗೆ ತಕ್ಕಂತೆ ಬದಲಾವಣೆಯನ್ನು ಮಾಡುತ್ತಿರುವ ಬಗ್ಗೆ ಈಗಾಗಲೇ ವ್ಯಾಪಕವಾಗಿ ಆಕ್ರೋಶಗಳು ಸೃಷ್ಟಿಯಾಗಿವೆ. ಇದೇ ಸಂದರ್ಭದಲ್ಲಿ ದ್ರಾವಿಡನಾಡಾದ ತಮಿಳುನಾಡಿನಲ್ಲಿ ಕೂಡ ಇದೇ ಮಾದರಿಯನ್ನು ಪ್ರಯೋಗಿಸಲು ಮುಂದಾಗಿದೆ. ಇದು ಅಣ್ಣಾ ಡಿಎಂಕೆ ಪಕ್ಷಕ್ಕೆ ತೀವ್ರವಾಗಿ ಕಿರಿಕಿರಿ ಉಂಟು ಮಾಡಿದ್ದು, ಇರುವ ಮತದಾರರು ಕೂಡ ಬೇರೆ ಪಕ್ಷಗಳಿಗೆ ಹೋಗುವ ಭೀತಿಯಲ್ಲದ್ದಾರೆ.

ಬಿಜೆಪಿಯ ಪ್ರಣಾಳಿಕೆಯು ತಮಿಳುನಾಡಿನ ಜನತೆಯನ್ನು ಅಣ್ಣ ಡಿಎಂಕೆ ಪಕ್ಷದಿಂದ ದೂರವಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯು ಇತರ ರಾಜ್ಯಗಳಲ್ಲಿ ಹೇರಿದಂತೆ ಬ್ರಾಹ್ಮಣ್ಯ ಸಿದ್ಧಾಂತ ಹೇರಲು ಪ್ರಯತ್ನಿಸಿದರೆ, ತನ್ನ ಮಿತ್ರ ಪಕ್ಷದ ಜೊತೆಗೆಯೇ ಮೂಲೆ ಗುಂಪಾಗುತ್ತದೆ  ಎಂಬ ಚರ್ಚೆಗಳು ಇದೀಗ ತಮಿಳುನಾಡಿನಲ್ಲಿ ಆರಂಭಗೊಂಡಿದೆ.

ಇತ್ತೀಚಿನ ಸುದ್ದಿ