ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತದೆ | ಸಚಿವ ಸುಧಾಕರ್ ನೀಡಿದ ಮಾಹಿತಿ ಏನು? - Mahanayaka

ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತದೆ | ಸಚಿವ ಸುಧಾಕರ್ ನೀಡಿದ ಮಾಹಿತಿ ಏನು?

sudhakar
09/06/2021


Provided by

ಬೆಂಗಳೂರು: ಬ್ಲ್ಯಾಕ್ ಫಂಗಸ್ ಸೋಂಕು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಇಲ್ಲಿಯವರೆಗೆ ಎಲ್ಲಿಯೂ ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತದೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರಗಳು ಲಭ್ಯವಾಗಿಲ್ಲ.

ಬಹಳಷ್ಟು ಜನರಿಗೆ ಇನ್ನೂ ಕೂಡ ಬ್ಲ್ಯಾಕ್ ಫಂಗಸ್ ಬಗ್ಗೆ ಅನುಮಾನಗಳಿವೆ. ಆಸ್ಪತ್ರೆಗಳಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಹರಡುತ್ತಿದೆ ಎಂದು ಇತ್ತೀಚೆಗೆ ಕೇರಳದ ಮಾಧ್ಯಮಗಳು ಬಲವಾದ ಚರ್ಚೆಗಳನ್ನು ನಡೆಸಿದ್ದವು. ಆದರೆ, ಕರ್ನಾಟಕದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತಿದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎನ್ನುವ ಟ್ವೀಟ್ ಮಾಡಿದ್ದು, ಬ್ಲ್ಯಾಕ್ ಫಂಗಸ್ ಹರಡುವಿಕೆಗೆ ಕಾರಣವನ್ನು ತಿಳಿಸಿದ್ದಾರೆ.

“ಬ್ಲಾಕ್ ಫಂಗಸ್ ಅಪರೂಪದ ಸೋಂಕು. ಮಣ್ಣು, ಗಿಡಗಳು ಹಾಗೂ ಕೊಳೆಯುತ್ತಿರುವ ತರಕಾರಿಗಳಲ್ಲಿ ಕಂಡುಬರುವ ಶಿಲೀಂದ್ರ ತೆರೆದ ಚರ್ಮ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ” ಎಂದು ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ