ಇನ್‌ ಸ್ಟಾಗ್ರಾಮ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಬ್ಲ್ಯಾಕ್ ಮೇಲ್: ಟೆಕ್ಕಿ ಅರೆಸ್ಟ್ - Mahanayaka
4:37 AM Wednesday 17 - September 2025

ಇನ್‌ ಸ್ಟಾಗ್ರಾಮ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಬ್ಲ್ಯಾಕ್ ಮೇಲ್: ಟೆಕ್ಕಿ ಅರೆಸ್ಟ್

fizal
03/09/2023

ಬೆಂಗಳೂರು: ಬೆಂಗಳೂರಿನಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಟೆಕ್ಕಿ ಫೈ‌ಸಲ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಫ್ಟ್‌ ವೇರ್‌ ಎಂಜಿನಿಯರ್ ಆಗಿದ್ದ ಫೈಸಲ್ ಇನ್‌ ಸ್ಟಾಗ್ರಾಮ್, ಫೇಸ್‌ ಬುಕ್‌ ನಲ್ಲಿ ನಕಲಿ ಖಾತೆ ಓಪನ್ ಮಾಡುತ್ತಿದ್ದ.


Provided by

ಈ ನಕಲಿ ಖಾತೆ ಮೂಲಕ ಮದುವೆ ಆಗಿರೋ ಚೆಂದದ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಈತನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಮೇಲೆ ದಿನ ರಾತ್ರಿ ಹಾಯ್, ಗುಡ್ ಮಾರ್ನಿಂಗ್, ಗುಡ್ ನೈಟ್ ಮಸೇಜ್‌ ಗಳಿಂದ ಶುರುವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ, ಗಂಡಂದಿರ ದೌರ್ಜನ್ಯ ಎಂದು ಹೇಳಿ ಉದ್ದುದ್ದ ಭಾಷಣ ಬಿಗಿದು ನೈಸಾಗಿ ಖೆಡ್ಡಕ್ಕೆ ಬೀಳಿಸಿಕೊಳ್ಖುತ್ತಿದ್ದ. ಬಳಿಕ ತನ್ನ ಖಾಸಗಿ ಜಾಗಕ್ಕೆ ಕರೆಸಿಕೊಂಡು ಅವರ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಅದನ್ನು ಯಾರಿಗೂ ಗೊತ್ತಾಗದ ಹಾಗೇ ವೀಡಿಯೋ ಕೂಡ ಮಾಡಿಕೊಳ್ಳುತ್ತಿದ್ದ.

ಇದಾದ ಕೆಲ ದಿನಗಳ ನಂತರ ಆ ಮಹಿಳೆಯರಿಗೆ ಕರೆ ಮಾಡ್ತಿದ್ದ ಟೆಕ್ಕಿ ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ. ಗಾಬರಿಯಾದ ಆಂಟಿಯರು, ನಾನ್ ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕುತ್ತೇನೆ ಎಂದು  ಬೆದರಿಕೆ ಹಾಕುತ್ತಿದ್ದ.

ಬೇಸತ್ತ ಹೆಚ್‌ ಎಸ್‌ ಆರ್ ಬಡಾವಣೆಯ ಮಹಿಳೆಯೊಬ್ಬರು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಮಹಿಳೆಯಿಂದ ಮಸೇಜ್ ಮಾಡಿ ಲೊಕೆಷನ್‌ ಹೇಳೋಕೆ ಹೇಳಿದ್ದಾರೆ. ಆಗ ಕಾಮುಕ ಚೆನ್ನೈನ ಒಂದು ಲಾಡ್ಜ್‌ ಗೆ ಬರೋಕೆ ಹೇಳಿದ್ದಾನೆ. ಆ ಮಹಿಳೆ ಬರುತ್ತಾಳೆ ಎಂದು ಕಾದು ಕುಳಿತಿದ್ದ ಫೈಸಲ್‌ ನನ್ನು ಬೆಂಗಳೂರು ಪೊಲೀಸರು ಬಂಧಿಸಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಈತ ಈ ಹಿಂದೆಯೂ ಇದೇ ರೀತಿಯ ಕೃತ್ಯಗಳನ್ನ ಎಸೆಗಿರುವ ಬಗ್ಗೆ ಮೊಬೈಲ್‌ನಲ್ಲಿ ಒಂದಷ್ಟು ಸಾಕ್ಷಿಗಳು ಸಿಕ್ಕಿವೆ. ತನಿಖೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ