ಹೃದಯಾಘಾತದಿಂದ ದೇಹದಾರ್ಡ್ಯಪಟು ನಿಧನ - Mahanayaka

ಹೃದಯಾಘಾತದಿಂದ ದೇಹದಾರ್ಡ್ಯಪಟು ನಿಧನ

santhosh kumar ullal
04/07/2025

ಮಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಸಾವಿನ ಓಟ ಮತ್ತೆ ಮುಂದುವರಿದಿದ್ದು, ಇದೀಗ ಮಂಗಳೂರಿನ ಜಲ್ಲಿಗುಡ್ಡೆ ನಿವಾಸಿ  ಭಾರತ್ ಕಿಶೋರ್ ಟೈಟಲ್ ವಿಜೇತ ದೇಹದಾರ್ಡ್ಯಪಟುವೊಬ್ಬರು ಹುಬ್ಬಳ್ಳಿಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ರೈಲ್ವೇ ಉದ್ಯೋಗಿ ಜಲ್ಲಿಗುಡ್ಡೆ ನಿವಾಸಿ ಸಂತೋಷ್ ಕುಮಾರ್ ಉಳ್ಳಾಲ್ (52) ಮೃತಪಟ್ಟವರಾಗಿದ್ದಾರೆ. ಉಳ್ಳಾಲ ಉಳಿಯ ಮೂಲದ ಸಂತೋಷ್ ಅವರು, ತೊಕ್ಕೊಟ್ಟಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕರ್ನಾಟಕ ಉದಯ, ಭಾರತ್ ಕಿಶೋರ್ ಟೈಟಲ್ ವಿಜೇತರಾಗಿದ್ದರು.

ಮಂಗಳೂರು ರೈಲ್ವೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹುಬ್ಬಳ್ಳಿಯಲ್ಲಿ ಸಭೆಯಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಯೊಂದಿಗೆ ತೆರಳುತ್ತಿದ್ದ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ