7 ಮಲ್ಟಿಫ್ಲೆಕ್ಟ್ ಗಳಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಟ್ವೀಟ್ | ಯುವಕನ ಬಂಧನ - Mahanayaka
4:14 PM Thursday 11 - December 2025

7 ಮಲ್ಟಿಫ್ಲೆಕ್ಟ್ ಗಳಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಟ್ವೀಟ್ | ಯುವಕನ ಬಂಧನ

08/02/2021

ಮುಂಬೈ: ನಗರದ 7 ಮಲ್ಟಿಫ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದು ಟ್ವೀಟ್ ಮಾಡಿದ ಆರೋಪದಲ್ಲಿ 19 ವರ್ಷದ ಯುವಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

 

ಬನ್ವಾರಿ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಜನವರಿ 22ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಆತ ಟ್ವೀಟ್ ಮಾಡಿದ್ದಾನೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 

ಯುವಕ ಬಳಕೆ ಮಾಡುತ್ತಿದ್ದ ಟ್ವಿಟ್ಟರ್ ಖಾತೆಯ ಹೆಸರು ಕಮಾಂಡೋ ಸಿಂಗ್ ಎಂದಾಗಿತ್ತು. ಟ್ವೀಟ್ ಬಂದ ತಕ್ಷಣವೇ ಪೊಲೀಸರು ಹಲವು ಮಲ್ಟಿಫ್ಲೆಕ್ಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ವಂಚಿಸುವ ಉದ್ದೇಶದಿಂದ ಈತ ಈ ಟ್ವೀಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ವೀಟ್ ಮಾಡಿದ ಬಳಿಕ ಯುವಕನೇ ಅದನ್ನು ಅಳಿಸಿ ಹಾಕಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಸೈಬರ್ ಸೆಲ್ ಪೊಲೀಸರು ಹರ್ಯಾಣದಲ್ಲಿ ಬಂಧಿಸಿದ್ದಾರೆ. ಟ್ವೀಟ್ ಮಾಡಲು ಬಳಸಿದ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿ