44 ಪ್ರಕರಣ ಬೇಧಿಸಿ 1.34 ಕೋಟಿ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿದ ಗಡಿಜಿಲ್ಲೆ ಪೊಲೀಸರು

05/09/2023
ಚಾಮರಾಜನಗರ: ಕಳೆದ 8 ತಿಂಗಳಿನಲ್ಲಿ ದಾಖಲಾಗಿದ್ದ 77 ವಿವಿಧ ಕಳವು ಪ್ರಕರಣಗಳಲ್ಲಿ 44 ಪ್ರಕರಣಗಳನ್ನು ಬೇಧಿಸಿ 1.34 ಕೋಟಿ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ಇಂದು ವಾರಸುದಾರರಿಗೆ ಒಪ್ಪಿಸಿದ್ದಾರೆ.
20 ಪ್ರಕರಣಗಳಲ್ಲಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ, 11 ಪ್ರಕರಣಗಳಲ್ಲಿ ವಾಹನಗಳು, 4 ಪ್ರಕರಣಗಳಲ್ಲಿ 10 ಲಕ್ಷ ನಗದು, 9 ಪ್ರಕರಣಗಳಲ್ಲಿ ತಾಮ್ರ-ಕಂಚಿನ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
44 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೌಲ್ಯ 1,34,46,261 ರೂ. ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.