ರಾತ್ರಿ ವೇಳೆ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ಬಾಲಕ: 7 ದಿನಗಳ ನಂತರ ಬಾಲಕ ಸಾವು

ಇಂದೋರ್ : ನೀರು ಎಂದು ಭಾವಿಸಿ ಆಕಸ್ಮಿಕವಾಗಿ ಆ್ಯಸಿಡ್ ಕುಡಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಬಂಗಂಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಭವಾನಿ ನಗರದ ನಿವಾಸಿ ಕೈಲಾಶ್ ಅಹಿರ್ವಾರ್ ಅವರ ಪುತ್ರ ಮಖಾನ್ ಎಂದು ಗುರುತಿಸಲಾಗಿದೆ. ಮಖಾನ್ ರಾತ್ರಿ ವೇಳೆ ನೀರು ಎಂದು ಭಾವಿಸಿ ಎರಡು ಬಾರಿ ಆ್ಯಸಿಡ್ ಕುಡಿದಿದ್ದನು. ನಂತರ ಅಸ್ವಸ್ಥಗೊಂಡು ವಾಂತಿ ಮಾಡಲು ಆರಂಭಿಸಿದ್ದಾನೆ. ಕುಟುಂಬಸ್ಥರು ಈ ವೇಳೆ ಬಾಲಕನನ್ನು ವಿಚಾರಿಸಿದಾಗ ಕೂಲರ್ ಬಳಿ ಇಟ್ಟಿದ್ದ ನೀರು(ಆ್ಯಸಿಡ್) ಕುಡಿದಿರುವುದಾಗಿ ಬಾಲಕ ಹೇಳಿದ್ದಾನೆ.
ಮೇ 6 ರಂದು ಮುಂಜಾನೆ 3: 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಏಳು ದಿನಗಳ ಸಾವು ಬದುಕಿನ ನಡುವಿನ ಹೋರಾಟದ ನಂತರ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸೋಮವಾರ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕನ ತಂದೆ ಕೂಲರ್ ಸ್ವಚ್ಛಗೊಳಿಸಲು ಅದೇ ದಿನ ಆಸಿಡ್ ಬಾಟಲಿಯನ್ನು ಖರೀದಿಸಿ ಅದರ ಪಕ್ಕದಲ್ಲಿ ಇಟ್ಟಿದ್ದರು. ಆದರೆ ಬಾಲಕ ಆ್ಯಸಿಡ್ ನ್ನು ನೀರು ಎಂದು ಭಾವಿಸಿ ಸೇವಿಸಿದ್ದಾನೆ.
ಮಕ್ಕಳು ಇರುವ ಮನೆಯಲ್ಲಿ ಯಾವುದೇ ಕಾರಣಕ್ಕೂ ಅಪಾಯಕಾರಿ ವಸ್ತುಗಳು ಹಾಗೂ ಆ್ಯಸಿಡ್ ನಂತಹ ದ್ರವಗಳನ್ನು ಮಕ್ಕಳ ಕೈಗೆಟಕುವ ಸ್ಥಳದಲ್ಲಿಡಬಾರದು. ಮಕ್ಕಳು ಇದ್ದ ಮನೆಯಲ್ಲಿ ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಕೆಲವೊಮ್ಮೆ ಸಣ್ಣ ತಪ್ಪುಗಳು ದೊಡ್ಡ ಅನಾಹುತಗಳನ್ನೇ ಸೃಷ್ಟಿಸಬಹುದು ಎನ್ನುವುದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068