ಬ್ರಹ್ಮಾವರ: ಡಿಜಿಟಲ್ ಮಾರ್ಕೆಟಿಂಗ್ ಹೂಡಿಕೆ ಹೆಸರಲ್ಲಿ ಮಹಿಳೆಗೆ 15.95 ಲಕ್ಷ ರೂ. ಆನ್‌ಲೈನ್ ವಂಚನೆ - Mahanayaka
5:48 PM Wednesday 24 - December 2025

ಬ್ರಹ್ಮಾವರ: ಡಿಜಿಟಲ್ ಮಾರ್ಕೆಟಿಂಗ್ ಹೂಡಿಕೆ ಹೆಸರಲ್ಲಿ ಮಹಿಳೆಗೆ 15.95 ಲಕ್ಷ ರೂ. ಆನ್‌ಲೈನ್ ವಂಚನೆ

fraud
24/12/2025

ಬ್ರಹ್ಮಾವರ: ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾದ ಬ್ರಹ್ಮಾವರದ ಮಹಿಳೆಯೊಬ್ಬರು ಬರೊಬ್ಬರಿ 15.95 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮ್ರಗೋಡು ಗ್ರಾಮದ ಅರುಣ ಆಚಾರ್ಯ (30) ಎಂಬುವವರ ಇನ್‌ಸ್ಟಾಗ್ರಾಮ್ ಖಾತೆಗೆ 2024ರ ಜುಲೈ 22ರಂದು ಡಿಜಿಟಲ್ ಮಾರ್ಕೆಟಿಂಗ್ ಹೂಡಿಕೆಯ ಬಗ್ಗೆ ಜಾಹೀರಾತೊಂದು ಬಂದಿತ್ತು. ಆಸಕ್ತಿ ತೋರಿದ ಅರುಣ ಅವರನ್ನು ಸಂಪರ್ಕಿಸಿದಾಗ, ಆರೋಪಿಗಳು ವಾಟ್ಸಾಪ್ ಮೂಲಕ ತರಬೇತಿ ನೀಡಿ ಮೊದಲು ಸಣ್ಣ ಮೊತ್ತದ ಹೂಡಿಕೆಗೆ ಹೆಚ್ಚಿನ ಲಾಭ ನೀಡಿದ್ದರು.

ಇದನ್ನು ನಂಬಿದ ಅರುಣ ಅವರು ಸೆಪ್ಟೆಂಬರ್‌ನಿಂದ ಡಿಸೆಂಬರ್ 19ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು 15,95,005 ರೂ.ಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ನಂತರ ಹಣವನ್ನೂ ಹಿಂದಿರುಗಿಸದೆ, ಲಾಭವನ್ನೂ ನೀಡದೆ ಆರೋಪಿಗಳು ವಂಚಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ