ವಿಮಾನ ನಿಲ್ದಾಣದ ಪ್ರದರ್ಶನ ಫಲಕದಲ್ಲಿ ಅಶ್ಲೀಲ ಚಿತ್ರ ಪ್ರಸಾರ!
ಬ್ರೆಜಿಲ್: ವಿಮಾನದ ಮಾಹಿತಿಗಾಗಿ ವಿಮಾನ ನಿಲ್ದಾಣದಲ್ಲಿನ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ ನೋಡುತ್ತಿದ್ದ ಪ್ರಯಾಣಿಕರು ಏಕಾಏಕಿ ಬೆಚ್ಚಿಬಿದ್ದರು. ವಿಮಾನದ ಮಾಹಿತಿಯ ಬದಲಿಗೆ, ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಚಿತ್ರಗಳ ಪ್ರದರ್ಶನವಾಗಿತ್ತು.
ಘಟನೆಯಿಂದ ಮುಜುಗರಕ್ಕೀಡಾದ ಪ್ರಯಾಣಿಕರು ತಮ್ಮ ಮಕ್ಕಳನ್ನು ಬೇಗನೆ ಸ್ಥಳಾಂತರಿಸಿದರು. ಇನ್ನು ಕೆಲವು ಪ್ರಯಾಣಿಕರು ಜೋರಾಗಿ ನಕ್ಕರು. ಇನ್ನು ಕೆಲವು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ತೀವ್ರತೆ ಅರಿವಾಗುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಕ್ಷಣವೇ ಎಲೆಕ್ಟ್ರಾನಿಕ್ ಡಿಸ್ಪ್ಲೇ ಬೋರ್ಡ್ ಅನ್ನು ಆಫ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು.
ಬ್ರೆಜಿಲ್‌ನ ಎರಡನೇ ದೊಡ್ಡ ನಗರವಾದ ರಿಯೊ ಡಿ ಜನೈರೊದ ಸ್ಯಾಂಟೋಸ್ ಡುಮಾಂಟ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯ ಸರ್ವರ್‌ನಿಂದ ಸಿಸ್ಟಮ್
ಹ್ಯಾಕ್ ಮಾಡಲಾಗಿದ್ದು, ಈ ಘಟನೆಯ ಹಿಂದೆ ಹ್ಯಾಕರ್ಸ್ ಕೈವಾಡ ಇದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಗೆ ಗೇಟ್ ಪಾಸ್!
ಪಠ್ಯಪುಸ್ತಕದ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗ್ತಿದೆ: ಸದಾನಂದ ಗೌಡ
ಮೇ 31, ಜೂನ್ 1ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಮುಸ್ಲಿಂ ಸಮಾವೇಶ
ದಲಿತ ಮಹಿಳೆಯರು ಪ್ರವೇಶಿಸಿದ ದೇವಸ್ಥಾನಕ್ಕೆ ಬೀಗ: ನಾಪತ್ತೆಯಾದ ಧರ್ಮ ರಕ್ಷಕರು!




























