ಲಂಚ ಕೇಸ್: ಗೌತಮ್ ಅದಾನಿ ಜೈಲಲ್ಲೇ ಇರಬೇಕು: ರಾಹುಲ್ ಗಾಂಧಿ ಕಿಡಿ - Mahanayaka
2:39 AM Wednesday 20 - August 2025

ಲಂಚ ಕೇಸ್: ಗೌತಮ್ ಅದಾನಿ ಜೈಲಲ್ಲೇ ಇರಬೇಕು: ರಾಹುಲ್ ಗಾಂಧಿ ಕಿಡಿ

27/11/2024


Provided by

ಉದ್ಯಮಿ ಗೌತಮ್ ಅದಾನಿ ಅವರು ಎಂದಿಗೂ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ನ್ಯಾಯಯುತವಾಗಿ ಅವರು ಜೈಲಿನಲ್ಲಿರಬೇಕು. ಆದರೆ ಕೇಂದ್ರ ಸರ್ಕಾರವೇ ಅದಾನಿ ಅವರನ್ನ ರಕ್ಷಣೆ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ʼದೇಶದಲ್ಲಿ ಸಣ್ಣ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸಿರುವಾಗ, ಅದಾನಿಯ ಬಂಧನ ಇನ್ನೂ ಯಾಕೆ ಆಗಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.

ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುಧ ಲಂಚ ಪ್ರಕರಣದಲ್ಲಿ ಅಮೆರಿಕಾ ಅಧಿಕಾರಿಗಳು ನ್ಯಾಯಾಲಯದಲ್ಲಿ ದೋಷಾರೋಪಣೆಯಲ್ಲಿ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಹುಲ್‌ ಗಾಂಧಿ, ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಪುನರುಚ್ಛಿಸಿದ್ದಾರೆ.

“ಅದಾನಿಗಳು ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ?. ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಅವರು ಆರೋಪಗಳನ್ನು ನಿರಾಕರಿಸಲಿದ್ದಾರೆ ಎನ್ನುವುದು ನಿಸ್ಸಂಶಯ” ಎಂದು ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್‌ ಉತ್ತರಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ