ಸಂಪ್ರದಾಯದಂತೆ ವಧು ವರನ ತಲೆಗೆ ಪೆಟ್ಟು ಕೊಟ್ಟ ವ್ಯಕ್ತಿಗೆ ಸಂಕಷ್ಟ: ಠಾಣೆ ಮೆಟ್ಟಿಲೇರಿಸಿದ ವೈರಲ್ ವೀಡಿಯೋ..! - Mahanayaka

ಸಂಪ್ರದಾಯದಂತೆ ವಧು ವರನ ತಲೆಗೆ ಪೆಟ್ಟು ಕೊಟ್ಟ ವ್ಯಕ್ತಿಗೆ ಸಂಕಷ್ಟ: ಠಾಣೆ ಮೆಟ್ಟಿಲೇರಿಸಿದ ವೈರಲ್ ವೀಡಿಯೋ..!

02/07/2023


Provided by

ಇತ್ತೀಚೆಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಲ್ಲಾಸ್ಸಾನಾ ಗ್ರಾಮದಲ್ಲಿ ವೀಡಿಯೊವೊಂದು ಸುದ್ದಿ ಮಾಡಿತ್ತು. ನವವಿವಾಹಿತ ದಂಪತಿ ಮೊದಲ ಬಾರಿಗೆ ವರನ ಮನೆಗೆ ಪ್ರವೇಶಿಸಲು ಸಿದ್ಧರಾಗಿದ್ದರು. ಪ್ರವೇಶಕ್ಕೆ ಶುಭ ಸಮಯ (ಮುಹೂರ್ತಂ) ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಯಾವುದೇ ಸೂಚನೆ ಇಲ್ಲದೇ ದಂಪತಿ ತಲೆಗೆ ಹಿಂದಿನಿಂದ ಹೊಡೆದಿದ್ದಾನೆ ಎಂಬ ವೀಡಿಯೋ ವೈರಲ್ ಆಗಿತ್ತು.

ಅನಿರೀಕ್ಷಿತವಾಗಿ ನೋವುಂಡ ವಧು ತನ್ನ ಗಂಡನ ಮನೆಗೆ ತನ್ನ ಮೊದಲ ಹೆಜ್ಜೆ ಇಡುತ್ತಿದ್ದಂತೆ ಕಣ್ಣೀರಿಟ್ಟಳು. ಇದೇ ವೇಳೆ ಆಕೆಯ ತಲೆ ಕಾಂಪೌಂಡ್ ಗೋಡೆಗೆ ತಾಗಿತ್ತು. ನಂತರ ಅವಳ ಪತಿ ಅವಳನ್ನು ಸಮಾಧಾನಪಡಿಸಿ ಅವಳ ತಲೆಯನ್ನು ಉಜ್ಜಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ.

ವಧು ವರನ ತಲೆಯನ್ನು ತಾಗಿಸಿದ ಆ ವ್ಯಕ್ತಿಯು ಒಂದು ಉದ್ದೇಶದಿಂದ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಅದೇನೆಂದರೆ ವಧುವು ತನ್ನ ಹೊಸ ಮನೆಯ ಒಳಗೆ ಮೊದಲ ಬಾರಿಗೆ ಹೆಜ್ಜೆ ಹಾಕಿದಾಗ ಅವಳನ್ನು ಅಳುವಂತೆ ಮಾಡುವುದು ಹಳ್ಳಿಯ ಸಂಪ್ರದಾಯವಂತೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಹಳಷ್ಟು ಚರ್ಚೆ ಶುರುವಾಯಿತು. ಈ ಸಂಪ್ರದಾಯವನ್ನು ಪಿತೃಪ್ರಧಾನ ಮತ್ತು ಅನಾಗರಿಕ ಎಂದು ಆನ್ ಲೈನ್ ನಲ್ಲಿ ಕೆಲವರು ದೂರಿದ್ದಾರೆ.

ಈಗ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಒಂದು ವಾರದ ನಂತರ, ದಂಪತಿ ತಲೆಗೆ ಒಟ್ಟಿಗೆ ಪೆಟ್ಟು ಕೊಟ್ಟ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರನ ಸಂಬಂಧಿ ಸುಭಾಷ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಹಲ್ಲೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ. ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ

ಇನ್ನು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಮಹಿಳಾ ಆಯೋಗ ಪೊಲೀಸರಿಗೆ ಸೂಚನೆ ನೀಡಿತ್ತು. ಅವರು ಗಂಡ ಮತ್ತು ಹೆಂಡತಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು 24 ನ್ಯೂಸ್ ವರದಿ ಮಾಡಿದೆ.
ಟಿವಿ ಚಾನೆಲ್ ಗಳೊಂದಿಗೆ ಮಾತನಾಡಿದ ಕೋಝಿಕೋಡ್ ನ ಮುಕ್ಕಂ ನಿವಾಸಿ ವಧು ಸಜಿಲಾ, ಈ ಘಟನೆಯಿಂದ ತನಗೆ ತೀವ್ರ ನೋವು ಮತ್ತು ಆಘಾತವಾಗಿತ್ತು ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ