ಎಪ್ರಿಲ್ ತಿಂಗಳು ‘ದಲಿತ ಇತಿಹಾಸ ತಿಂಗಳು’ ಎಂದು ಘೋಷಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ - Mahanayaka

ಎಪ್ರಿಲ್ ತಿಂಗಳು ‘ದಲಿತ ಇತಿಹಾಸ ತಿಂಗಳು’ ಎಂದು ಘೋಷಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ

ambedkar
01/04/2022


Provided by

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಎಪ್ರಿಲ್ ತಿಂಗಳನ್ನು ‘ದಲಿತ ಇತಿಹಾಸ ತಿಂಗಳು’(Dalit History Month) ಎಂದು ಗುರುತಿಸಿ, ಘೋಷಿಸುವ ಮೂಲಕ ನ್ಯೂ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ (NDP) ಕೆನಡಾದ ಬ್ರಿಟಿಷ್ ಕೊಲಂಬಿಯಾ  ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಎಪ್ರಿಲ್ ತಿಂಗಳು ಮಹತ್ವದ ತಿಂಗಳಾಗಿದ್ದು, ದಲಿತ ಇತಿಹಾಸದ ದಿನಗಳನ್ನು ಎಪ್ರಿಲ್ ನಲ್ಲಿ ಆಚರಿಸಲಾಗುತ್ತದೆ. ಇದಲ್ಲದೇ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸೇರಿದಂತೆ ಹಲವು ಮಹತ್ವದ ದಿನಗಳು ಎಪ್ರಿಲ್ ನಲ್ಲೇ ಬರುತ್ತದೆ.

ವರ್ಣ ಭೇಧ, ತಾರತಮ್ಯದ ವಿರುದ್ಧ ಹೋರಾಡಲು ಹಾಗೂ ಎಲ್ಲರಿಗೂ ನ್ಯಾಯ ಮತ್ತು ಸಮಾನತೆ ಕಲ್ಪಿಸಲು ಬ್ರಿಟಿಷ್ ಕೊಲಂಬಿಯಾ ಸರ್ಕಾರವು ಈ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಎಪ್ರಿಲ್ ನ್ನು ದಲಿತ ಇತಿಹಾಸ ತಿಂಗಳು ಎಂದು ಆಚರಿಸುವುದಾಗಿ ಸರ್ಕಾರ ಹೇಳಿದೆ.

ಇನ್ನೂ ದಲಿತರಿಗೆ  ಎಪ್ರಿಲ್ ತಿಂಗಳು ಬಹಳ ಪ್ರಮುಖವಾದದ್ದು ಏಕೆಂದರೆ, ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿಬಾಫುಲೆ, ಮಂಗುರಾಮ್ ಮುಗೋವಾಲಿಯ ಮತ್ತು ಸಂತರಾಮ್ ಉದಾಸಿಯಂತಹ ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸಮಾಜ ಸುಧಾರಕರ ಜನ್ಮ ದಿ ಹಾಗೂ ಮರಣ ದಿನಗಳು ಎಪ್ರಿಲ್ ತಿಂಗಳಿನಲ್ಲಿಯೇ ಬರುತ್ತದೆ. ಹೀಗಾಗಿ ಈ ತಿಂಗಳಿನಲ್ಲಿ ಅತೀ ಹೆಚ್ಚು ಸ್ಮರಣಾ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್, ಹಲಾಲ್  ಬಗ್ಗೆ ಮಾತನಾಡಿದರೆ ಏನಾಗುತ್ತೋ ಅನ್ನೋದು ಬೇಡ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಹೇಳಿದ್ದೇನು?

ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಬಸ್

ತಂದೆಯ ಕೊಲೆ ಪ್ರಕರಣ: ಪುತ್ರ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ

ವಿಶ್ವ ಮೂರ್ಖರ ದಿನ ದಿನದ ಇತಿಹಾಸ [April Fools’ Day] ಏನು ಗೊತ್ತಾ?

ಮುಸ್ಲಿಂ ಮಗುವಿಗೆ ಸಿದ್ಧಗಂಗ ಶ್ರೀಗಳ ನೆನಪಿಗೆ ‘ಶಿವಮಣಿ’ ಎಂದು ನಾಮಕರಣ

ಇತ್ತೀಚಿನ ಸುದ್ದಿ