ಕೊರೊನಾ ಆಘಾತದ ಬೆನ್ನಲ್ಲೇ ಶಾಕಿಂಗ್ ನ್ಯೂಸ್ ನೀಡಿದ ಬ್ರಿಟನಿನ ಖ್ಯಾತ ಸಂಶೋಧಕ..!

ಕೊರೋನಾ ಆಘಾತದಿಂದ ಜಗತ್ತು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರ ಬಂದಿಲ್ಲ. ಇತ್ತೀಚೆಗಷ್ಟೇ ಸಿಂಗಾಪುರದಲ್ಲಿ ದೊಡ್ಡಮಟ್ಟದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಈ ನಡುವೆಯೇ ಬ್ರಿಟನಿನ ಖ್ಯಾತ ಸಂಶೋಧಕ ಸರ್ ಪ್ಯಾಟ್ರಿಕ್ ವಾಲ್ಸನ್ ಅವರು ದಂಗುಬಡಿಸುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ಕೊರೋನಾಕ್ಕಿಂತಲೂ ತೀವ್ರತರವಾದ ಮಹಾಮಾರಿ ಜಗತ್ತನ್ನು ಅಪ್ಪಳಿಸಲಿದೆ ಎಂದವರು ಹೇಳಿದ್ದಾರೆ.
ಬ್ರಿಟಿಷ್ ಸರಕಾರದ ಮಾಜಿ ವೈಜ್ಞಾನಿಕ ಸಲಹೆಗಾರರಾಗಿದ್ದ ಪ್ಯಾಟ್ರಿಕ್ ಅವರು ಹೊಸ ಮಹಾಮಾರಿಯ ಬಗ್ಗೆ ಸಾಕಷ್ಟು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಸರಕಾರ ಈ ಕುರಿತಂತೆ ಸಾಕಷ್ಟು ಮುಂಜಾಗರೂಪತೆಯನ್ನು ಪಾಲಿಸಬೇಕು ಮತ್ತು ಆ ಬಗ್ಗೆ ಸನ್ನದ್ಧತೆಯಿಂದ ಇರಬೇಕು ಎಂದು ಅವರು ಹೇಳಿರುವುದಾಗಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಈ ಕುರಿತಂತೆ ಸರ್ಕಾರ ತೀವ್ರಗತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ವ್ಯಾಕ್ಸಿನ್ ಮತ್ತು ಔಷಧಗಳಿಗೆ ತುರ್ತು ಗಮನ ನೀಡಬೇಕು. ಈ ಬಗ್ಗೆ ಜಾಗರೂಕರಾಗದಿದ್ದರೆ ಭಾರಿ ಅಪಾಯ ಕಾದಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth