ರಾಯಲ್ ಫ್ಯಾಮಿಲಿಯಲ್ಲಿ ಕೆಲಸ | ಆರಂಭಿಕ ವೇತನ 18.5 ಲಕ್ಷ ರೂ. | ವಾರದಲ್ಲಿ 5 ದಿನ ಮಾತ್ರ ಕೆಲಸ! - Mahanayaka
7:55 PM Tuesday 16 - December 2025

ರಾಯಲ್ ಫ್ಯಾಮಿಲಿಯಲ್ಲಿ ಕೆಲಸ | ಆರಂಭಿಕ ವೇತನ 18.5 ಲಕ್ಷ ರೂ. | ವಾರದಲ್ಲಿ 5 ದಿನ ಮಾತ್ರ ಕೆಲಸ!

28/10/2020

ರಾಯಲ್ ಫ್ಯಾಮಿಲಿಯಲ್ಲಿ  ವಾಸಿಸುವ ಕನಸು ಎಂದಾದರೂ ಕಂಡಿದ್ದೀರಾ? ಕಂಡಿದ್ದೀರೇ ಆಗಿದ್ದರೆ, ಈಗ ಅದಕ್ಕೊಂದು ಸದಾವಕಾಶ ಕೂಡಿ ಬಂದಿದೆ. ಬ್ರಿಟೀಷ್

ರಾಯಲ್ ಫ್ಯಾಮಿಲಿಯಲ್ಲಿ ವಿಂಡ್ಸರ್ ಕೋಟೆಯಲ್ಲಿ ಇದೀಗ “ಹೌಸ್ ಕೀಪಿಂಗ್ ಅಸಿಸ್ಟೆಂಟ್”ನ್ನು ಹುಡುಕುತ್ತಿದ್ದಾರೆ. ಬರೇ ಹೌಸ್ ಕೀಪಿಂಗಾ!? ಎಂದು ಕೋಪಗೊಳ್ಳಬೇಡಿ. ಯಾಕೆಂದರೆ ಈ ಉದ್ಯೋಗಕ್ಕಾಗಿ ನೀವು ಆರಂಭಿಕವಾಗಿ ಬರೋಬ್ಬರಿ 18.5 ಲಕ್ಷ ರೂಪಾಯಿ ವೇತನ ಪಡೆಯಬಹುದಾಗಿದೆ.\


ಈ ಕೆಲಸದ ವಿವರಗಳನ್ನು ರಾಯಲ್ ಹೌಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.  ಭಾರೀ ಮೊತ್ತದ ಸಂಬಳ ಮಾತ್ರವಲ್ಲದೇ, ನಿಮಗೆ ನಿಲ್ಲಲು ಐಶಾರಾಮಿ ಸೌಕರ್ಯಗಳನ್ನೂ ನೀಡಲಾಗುತ್ತದೆಯಂತೆ. ಜೊತೆಗೆ ಅದ್ದೂರಿ ಭೋಜನ, ಮನರಂಜನಾ ಸೌಲಭ್ಯಗಳನ್ನೂ ನೀವು ಅಲ್ಲಿ ಪಡೆದುಕೊಳ್ಳಬಹುದಾಗಿದೆ.


ಈ ಉದ್ಯೋಗಕ್ಕೆ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದಂತೆ. ನಂತರದ ಒಂದು ಸುತ್ತಿನ ಸಂದರ್ಶನದ ಬಳಿಕ 13 ತಿಂಗಳ ತರಬೇತಿಗೆ ಹಾಜರಾಗಬೇಕು. ತರಬೇತಿ ಪಡೆದ ಬಳಿಕ ನೀವು ಖಾಯಂ ಉದ್ಯೋಗವನ್ನು ಅಲ್ಲಿ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಇಂಗ್ಲಿಷ್ ಮತ್ತು ಗಣಿತದಲ್ಲಿ ಸರಿಯಾದ ಅರ್ಹತೆ ಹೊಂದಿರಬೇಕು. ನಿಮಗೆ ಇದು ಗೊತ್ತಿಲ್ಲದಿದ್ದರೆ, ನೀವು ಅದನ್ನು ಕಲಿಯಬೇಕಾಗುತ್ತದೆ. ಅಭ್ಯರ್ಥಿಯು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ ಎನ್ನುವ ನಿಯಮಗಳನ್ನು ಹಾಕಲಾಗಿದೆ.  ಇನ್ನೂ ಈ ಅರ್ಜಿಯನ್ನು ಸಲ್ಲಿಸಲು ಇಂದು ಅಂದರೆ ಅಕ್ಟೋಬರ್ 28 ಕೊನೆಯ ದಿನಾಂಕವಾಗಿದೆ.


ಇತ್ತೀಚಿನ ಸುದ್ದಿ