ಬ್ರದರ್ ಸ್ವಾಮಿ ಹಗ್ಗವನ್ನು ತೋರಿಸಿ ಹಾವು ಅಂತ ನಂಬಿಸುತ್ತಿದ್ದಾರೆ: ಹೆಚ್.ಡಿ.ಕೆ. ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಹಾಸನ ಪೆನ್ ಡ್ರೈವ್ ರಿಲೀಸ್ ಪ್ರಕರಣದ ಕಾರ್ತಿಕ್ ಗೌಡ ವಿದೇಶಕ್ಕೆ ಹೋಗಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ ಇದೀಗ ಆತ ರಾಜ್ಯದಲ್ಲೇ ಇದ್ದು, ಮಾಧ್ಯಮಗಳ ಮುಂದೆ ಹಾಜರಾಗಿದ್ದಾನೆ ಎಂದು ಕಾಂಗ್ರೆಸ್ ಹೇಳಿದ್ದು, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.
ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬ್ರದರ್ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಡ್ರೈವರ್ ಕಾರ್ತಿಕ್ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ, ಯಾರೋ ಕಳಿಸಿದ್ದಾರೆ ಎಂದು ಕುಮಾರಸ್ವಾಮಿ ಬಾಯಿ ಬಡಿದುಕೊಂಡಿದ್ದರು. ಆದರೆ ಕಾರ್ತಿಕ್ ಗೌಡ ಬಳಿ ಪಾಸ್ ಪೋರ್ಟ್ ಇಲ್ಲವಂತೆ ಹಾಗೂ ಕಾರ್ತಿಕ್ ಗೌಡ ರಾಜ್ಯದಲ್ಲೇ ಇದ್ದು ಚಾನಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟ ಪಡಿಸಿದೆ.
ಬ್ರದರ್ ಸ್ವಾಮಿಯ ಸುಳ್ಳಿನ ಫ್ಯಾಕ್ಟರಿ ಜೊತೆಗೆ ಬಿಜೆಪಿಯ ಫೇಕ್ ಫ್ಯಾಕರಿಯೂ ಸೇರಿ ಸುಳ್ಳಿನ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97