ಉದ್ಯೋಗಾವಕಾಶ: ಗಡಿ ಭದ್ರತಾ ಪಡೆಯಲ್ಲಿ 3,588 ಹುದ್ದೆಗಳಿಗೆ ನೇಮಕಾತಿ

BSF Tradesman recruitment 2025: ಗಡಿ ಭದ್ರತಾ ಪಡೆಯಲ್ಲಿ 3,588 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ ಸ್ಟೇಬಲ್(ಟ್ರೇಡ್ ಮನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 3,588 ಹುದ್ದೆಗಳಲ್ಲಿ 3,406 ಹುದ್ದೆಗಳು ಪುರುಷರಿಗೆ ಮತ್ತು 182 ಹುದ್ದೆಗಳು ಮಹಿಳೆಯರಿಗೆ ಮೀಸಲಿಡಲಾಗಿದೆ.
ಅರ್ಹತೆ:
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಟ್ರೇಡ್ ನಲ್ಲಿ ಕನಿಷ್ಠ 2 ವರ್ಷಗಳ ಐಟಿಐ ಅಥವಾ ಸಮಾನ ಪ್ರಮಾಣ ಪತ್ರ ಕೋರ್ಸ್ ಪೂರ್ಣಗೊಳಿಸಿರಬೇಕು. ಕೆಲವು ಟ್ರೇಡ್ ಗಳಿಗೆ ಅನುಭವದ ಪ್ರಮಾಣ ಪತ್ರವೂ ಅಗತ್ಯವಿದೆ.
ವಯೋಮಿತಿ:
ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ, ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿ ವಯೋಮಿತಿಯಲ್ಲಿ ವರ್ಗಾವಾರು ಸಡಿಲಿಕೆಯಿದೆ. SC/ST 5 ವರ್ಷ, OBC 3 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕ:
ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ 100 ರೂ. SC/ST ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ದೈಹಿಕ ಗುಣಮಟ್ಟ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23—08—2025 ಕೊನೆಯ ದಿನಾಂಕವಾಗಿರುತ್ತದೆ. www.rectt.bsf.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD