ಬಿಎಸ್‌ಪಿ ಮಾತ್ರ ದೇಶಕ್ಕೆ ಅಚ್ಛೇದಿನ್ ತರಬಲ್ಲ ಪಕ್ಷ: ಮಾಯಾವತಿ - Mahanayaka
12:47 AM Wednesday 15 - October 2025

ಬಿಎಸ್‌ಪಿ ಮಾತ್ರ ದೇಶಕ್ಕೆ ಅಚ್ಛೇದಿನ್ ತರಬಲ್ಲ ಪಕ್ಷ: ಮಾಯಾವತಿ

mayavatti
04/02/2022

ಲಕ್ನೋ: ಬಿಜೆಪಿಯು ಜಾತಿ ರಾಜಕಾರಣ ಮಾಡುತ್ತಿದ್ದು, ಕೋಮು ದ್ವೇಷ ಹರಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಹೇಳಿದ್ದಾರೆ.


Provided by

ಖಾದ್ಯ ತೈಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ತಡೆಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕಡೆಗಣಿಸಿದೆ. ಅಧಿಕಾರದಲ್ಲಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿಲ್ಲ ಎಂದು ಮಾಯಾವತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮತ್ತೊಬ್ಬ ದಲಿತ ನಾಯಕ ಕಾನ್ಶಿರಾಮ್ ಅವರನ್ನೂ ಕಾಂಗ್ರೆಸ್ ಕಡೆಗಣಿಸಿದೆ ಎಂದು ಅವರು ದೂರಿದರು.

ಜನರು ಬಿಜೆಪಿ, ಎಸ್‌ ಪಿ ಅಥವಾ ಕಾಂಗ್ರೆಸ್‌ಗೆ ಮತ ನೀಡಬಾರದು. ಬಿಎಸ್‌ಪಿಯಿಂದ ಮಾತ್ರ ಅಚ್ಛೇ ದಿನ್ ತರಬಲ್ಲದು ಎಂದು ಮಾಯಾವತಿ ಹೇಳಿದರು.

ಎಸ್‌ ಸಿ, ಎಸ್‌ ಟಿ ಮತಗಳಿಗಾಗಿ ಕಾಂಗ್ರೆಸ್ ನಾಟಕ ಮಾಡುತ್ತಿದೆ ಎಂದಿರುವ ಅವರು, ಸಮಾಜವಾದಿ ಪಕ್ಷದ ಆಡಳಿತದ ಸಂದರ್ಭದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ, ಮಾಫಿಯಾ ಹಾಗೂ ಸಮಾಜವಿರೋಧಿ ಚಟುವಟಿಕೆಗಳು ಹೆಚ್ಚಾಗಿದ್ದವು ಎಂದು ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಪತ್ತೆಯಾಗಿದ್ದ ಎಎಸ್‌ ಐ ನದಿಯಲ್ಲಿ ಶವವಾಗಿ ಪತ್ತೆ

ಕಣ್ಣಿಗೆ ಜಿಗಣೆ ಹೋಗಿದೆ ಎಂದು ಕಣ್ಣಿನ ಗುಡ್ಡೆಯನ್ನೇ ಕಿತ್ತೆಸೆದ ವ್ಯಕ್ತಿ

ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು

ಒಳ ಉಡುಪಿನಲ್ಲಿ ಜೈಲಿನೊಳಗೆ ಡಗ್ಸ್​ ಸಾಗಿಸುತ್ತಿದ್ದ ಅಧಿಕಾರಿ ಬಂಧನ

ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ

 

ಇತ್ತೀಚಿನ ಸುದ್ದಿ