ದಕ್ಷಿಣ ಭಾರತದಲ್ಲಿ ಬಿಎಸ್ ಪಿಯಿಂದ ಮೊದಲ ಬಾರಿ ಗೆದ್ದಿದ್ದ ಮಾಜಿ ಶಾಸಕ ನಿಧನ - Mahanayaka
4:39 PM Thursday 29 - January 2026

ದಕ್ಷಿಣ ಭಾರತದಲ್ಲಿ ಬಿಎಸ್ ಪಿಯಿಂದ ಮೊದಲ ಬಾರಿ ಗೆದ್ದಿದ್ದ ಮಾಜಿ ಶಾಸಕ ನಿಧನ

zulfikar hasmi
20/04/2021

ಬೀದರ್: ದಕ್ಷಿಣ ಭಾರತದಲ್ಲಿ ಬಹುಜನ ಸಮಾಜ ಪಾರ್ಟಿಯ ಖಾತೆ ತೆರೆದ ಪ್ರಥಮ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಜುಲ್ಫೇಕರ್‌ ಹಾಸ್ಮಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಜುಲ್ಫೇಕರ್‌ ಹಾಸ್ಮಿ ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ತಿಂಗಳಿನಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಹೈದರಾಬಾದ್ ನ ಆಸರಾ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.  ಎರಡು ದಿನಗಳ ಹಿಂದೆ ತೀವ್ರವಾಗಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ತಿಳಿದು ಬಂದಿದೆ.

1994ರಲ್ಲಿ ಬೀದರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಜುಲ್ಫೇಕರ್‌ ಹಾಸ್ಮಿ ದಕ್ಷಿಣ ಭಾರತದಲ್ಲಿ ಮೊದಲ ಖಾತೆ ತೆರೆದ ಬಿಎಸ್ ಪಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದರು.  ಆ ಬಳಿಕ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿ