ಹಳೆಯ ಸರ್ಕಾರಿ ವಾಹನಗಳ ಬದಲಾವಣೆಗೆ ಕ್ರಮ: ಪೊಲ್ಯುಟಿಂಗ್ ಬದಲು 'ಪೊಲಿಟಿಕಲ್' ಎಂದ ಸಚಿವರು! - Mahanayaka
6:17 PM Thursday 16 - October 2025

ಹಳೆಯ ಸರ್ಕಾರಿ ವಾಹನಗಳ ಬದಲಾವಣೆಗೆ ಕ್ರಮ: ಪೊಲ್ಯುಟಿಂಗ್ ಬದಲು ‘ಪೊಲಿಟಿಕಲ್’ ಎಂದ ಸಚಿವರು!

nirmala seetharaman
01/02/2023

ತೀವ್ರವಾದ ಮಾಲಿನ್ಯ ಉಂಟು ಮಾಡುವ ಸರ್ಕಾರಿ ಹಳೆಯ ವಾಹನಗಳನ್ನು ಬದಲಾವಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.


Provided by

ಕೇಂದ್ರ ಬಜೆಟ್ – 2023 ಮಂಡನೆ ವೇಳೆ ಮಾತನಾಡಿದ ನಿರ್ಮಲ ಸೀತಾರಾಮನ್, ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದರು.

ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದ ವೇಳೆ  ಪೊಲ್ಯುಟಿಂಗ್ ಅನ್ನೋ ಶಬ್ಧ ಉಚ್ಛಾರಣೆ ವೇಳೆ ಸಚಿವರು ಬಾಯ್ತಪ್ಪಿ ಪೊಲಿಟಿಕಲ್ ಎಂದು ಹೇಳಿದ್ದು, ಈ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರ್ಮಲಾ ಸೀತಾರಾಮನ್ ಅವರನ್ನು ಲೇವಡಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಹಳೆಯ ಮಾಲಿನ್ಯಕಾರಕಗಳನ್ನು ಬದಲಿಸಬೇಕು, ನಾನು ಹೇಳಿದ್ದು ಸರಿ ತಾನೆ ಎಂದು ಮರು ಪ್ರಶ್ನೆ ಹಾಕಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ