ಬೈಕ್ ಶೋರೂಮ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವು: ಆರೋಪಿ ಅರೆಸ್ಟ್ - Mahanayaka
11:14 PM Thursday 6 - November 2025

ಬೈಕ್ ಶೋರೂಮ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವು: ಆರೋಪಿ ಅರೆಸ್ಟ್

garodi
15/10/2023

ಮಂಗಳೂರು ನಗರದ ಕಂಕನಾಡಿ ಬಳಿಯ ನಾಗುರಿಯಲ್ಲಿರೋ ಬುಲೆಟ್ ಬೈಕ್ ಶೋರೂಮ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯೊಬ್ಬರು ತನ್ನ ಬುಲೆಟ್ ಬೈಕ್ ಕಳವಾಗಿದ್ದ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಇದೇ ವೇಳೆ, ಕದ್ರಿ ಠಾಣೆಯಲ್ಲಿ ಯಮಹಾ ಎಫ್ ಜೆಡ್ ಬೈಕ್ ಕಳವಾದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.

ಇವೆರಡು ಬೈಕ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಹಮ್ಮದ್ ಅರಾಫತ್ (24) ಎಂದು ಗುರುತಿಸಲಾಗಿದೆ. ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ